ಲಂಡನ್: ಸತತ ಎರಡನೇ ಬಾರಿಯೂ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತಕ್ಕೆ ಸೋಲುವ ಭೀತಿ ಕಾಡುತ್ತಿದೆ.

ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಫೈನಲ್ ಪಂದ್ಯದ ಅಂತಿಮ ದಿನದಾಟದಲ್ಲಿ ಭಾರತೀಯ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದಾರೆ.

ಅಂತಿಮ ದಿನದಾಟದಲ್ಲಿ ತಾಜಾ ವರದಿಯ ವೇಳೆಗೆ ಟೀಮ್ ಇಂಡಿಯಾ 58 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದೆ.

ಭಾರತಕ್ಕಿನ್ನು ಗೆಲ್ಲಲು 231 ರನ್ ಬೇಕಾಗಿದೆ. ಆದರೆ ಈ ಗುರಿ ತಲುಪುವುದು ಕಷ್ಟ ಸಾಧ್ಯವೆನಿಸಿದೆ. ಅತ್ತ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಲು ಆಸ್ಟ್ರೇಲಿಯಾಕ್ಕೆ ಮೂರು ವಿಕೆಟ್ ಮಾತ್ರ ಬೇಕಾಗಿದೆ.

ಮಾಜಿ ನಾಯಕ ವಿರಾಟ್ ಕೊಹ್ಲಿ 49 ಹಾಗೂ ಅಜಿಂಕ್ಯ ರಹಾನೆ 46 ರನ್ ಗಳಿಸಿ ಔಟ್ ಆದರು. ಆಸ್ಟ್ರೇಲಿಯಾ ಪರ ಸ್ಕಾಟ್ ಬೋಲಂಡ್ ಮೂರು ಮತ್ತು ನಥನ್ ಲಯಾನ್ ಎರಡು ವಿಕೆಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.