ನವದೆಹಲಿ: ಭಾರತ ತಂಡದ ಮಧ್ಯಮ ವೇಗಿ ದೀಪಕ್ ಚಾಹರ್ ಅವರು ದಕ್ಷಿಣ ಆಫ್ರಿಕಾದ ಡರ್ಬನ್ನಲ್ಲಿ ಭಾನುವಾರ ಮೊದಲ ಟಿ20 ಪಂದ್ಯದ ವೇಳೆಯೂ ತಂಡವನ್ನು ಸೇರಿಕೊಂಡಿರಲಿಲ್ಲ. ವೈಯಕ್ತಿಕ ಕಾರಣಗಳಿಂದ ಅವರು ಇನ್ನೂ ತವರಿನಲ್ಲೇ ಉಳಿದಿದ್ದಾರೆ.

ಚಾಹರ್ ಅವರ ಕುಟುಂಬ ಸದಸ್ಯರೊಬ್ಬರು ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಅವರು ಮನೆಯಲ್ಲೇ ಉಳಿದಿದ್ದಾರೆ ಎಂದು ಹೇಳಲಾಗಿದೆ. ಚಾಹರ್ ಅವರು ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಐದನೇ ಪಂದ್ಯದಲ್ಲೂ (ಬೆಂಗಳೂರು) ಆಡಿರಲಿಲ್ಲ. ಹೀಗಾಗಿ ಅವರು ದಕ್ಷಿಣ ಆಫ್ರಿಕಾದ ಸರಣಿಯಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.

‘ಕುಟುಂಬದ ವರ್ಗದ ಒಬ್ಬರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಬೇಕಾದ ಕಾರಣ ದೀಪಕ್ ಅವರು ದರ್ಬಾನ್ನಲ್ಲಿರುವ ತಂಡವನ್ನು ಸೇರಿಕೊಂಡಿಲ್ಲ. ಅವರು ಬಿಸಿಸಿಐನಿಂದ ಒಪ್ಪಿಗೆ ಪಡೆದಿದ್ದಾರೆ. ಕುಟುಂಬ ಸದಸ್ಯರ ಆರೋಗ್ಯದ ಸ್ಥಿತಿಯ ಮೇಲೆ ಅವರು ತಂಡವನ್ನು ಸೇರಿಕೊಳ್ಳುತ್ತಾರೊ ಇಲ್ಲವೊ ಎಂಬುದು ನಿರ್ಧಾರವಾಗಲಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

31 ವರ್ಷದ ರಾಜಸ್ತಾನದ ಆಟಗಾರ, ಟಿ20 ಕ್ರಿಕೆಟ್ನಲ್ಲಿ 7 ರನ್ನಿಗೆ 6 ವಿಕೆಟ್ ಪಡೆದು ಶ್ರೇಷ್ಠ ಸಾಧನೆ ಪ್ರದರ್ಶಿಸಿದ್ದಾರೆ. ಆದರೆ ಎರಡು ವರ್ಷಗಳಿಂದ ಗಾಯಾಳಾಗಿ ಅವರು ಹೆಚ್ಚಿನ ಪಂದ್ಯಗಳನ್ನು ಕಳೆದುಕೊಂಡಿದ್ದಾರೆ.

ವಿಶ್ವಕಪ್ ನಂತರ ರಜಾ ಪ್ರವಾಸದಲ್ಲಿದ್ದ ಶುಭಮನ್ ಗಿಲ್ ಮತ್ತು ರವೀಂದ್ರ ಜಡೇಜಾ ಅವರು ಡರ್ಬನ್ನಲ್ಲಿ ತಂಡವನ್ನು ಸೇರಿಕೊಂಡಿದ್ದು, ತಂಡದ ಅಭ್ಯಾಸದಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.