ದುಬೈ: ‘ಎಬಿ ಡಿವಿಲಿಯರ್ಸ್ ಅಪಾರ ಪ್ರತಿಭಾನ್ವಿತ ಆಟಗಾರ. ಹಾಲ್ ಆಫ್ ಫೇಮ್ ಗೌರವಕ್ಕೆ ಅತ್ಯಂತ ಸೂಕ್ತ ವ್ಯಕ್ತಿ’–

ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರ ಬಗ್ಗೆ ಭಾರತದ ಬ್ಯಾಟಿಂಗ್ ತಾರೆ ವಿರಾಟ್ ಕೊಹ್ಲಿ ವ್ಯಕ್ತಪಡಿಸಿರುವ ಮೆಚ್ಚುಗೆ ನುಡಿಗಳಿವು.

ಕ್ರಿಕೆಟಿಗರ ಸ್ನೇಹದ ವಿಷಯ ಬಂದಾಗ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಜೋಡಿಯು ಮುಂಚೂಣಿಯಲ್ಲಿರುತ್ತದೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಬ್ಬರಿಗೊಬ್ಬರು ಎದುರಾಳಿಗಳಾಗಿ ಆಡಿದವರು. ಆದರೆ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಜೊತೆಗೂಡಿ ಆಡಿದ್ದರು.

ಎಬಿಡಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ಒಲಿದ ಸಂದರ್ಭದಲ್ಲಿ ವಿರಾಟ್ ಬಹಿರಂಗ ಪತ್ರವೊಂದನ್ನು ಬರೆದು ಅಭಿನಂದಿಸಿದ್ದಾರೆ.

‘ಈ ಗೌರವಕ್ಕೆ ತಾವು ಅತ್ಯಂತ ಅರ್ಹ ವ್ಯಕ್ತಿಯಾಗಿದ್ದೀರಿ. ಕ್ರಿಕೆಟ್ ಆಟದ ಬೆಳವಣಿಗೆಯಲ್ಲಿ ತಾವು ಬೀರಿದ ಪ್ರಭಾವದ ಪ್ರತೀಕ ಈ ಗೌರವವಾಗಿದೆ. ತಾವು ಕೊಟ್ಟ ಕಾಣಿಕೆಯು ಅತ್ಯಂತ ವೈಶಿಷ್ಟ್ಯಪೂರ್ಣವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ತಂಡವನ್ನು ಹಲವು ಬಾರಿ ಸಂಕಷ್ಟದಿಂದ ಪಾರು ಮಾಡಿದ ಸಂದರ್ಭಗಳು ಸದಾ ಸ್ಮರಣೀಯ. ಅದರಿಂದಾಗಿಯೇ ಎಬಿಡಿ ಜನಮಾನಸದಲ್ಲಿ ಸ್ಥಾನ ಪಡೆದಿದ್ದಾರೆ’ ಎಂದು ವಿರಾಟ್ ಬಣ್ಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.