ಮಾಸ್ಕೊ: ಇಲ್ಲಿನ ಲುಜ್ನಿಕಿಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆಯಲಿರುವ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕ್ರೊವೇಷ್ಯಾ ಮತ್ತು ಫ್ರಾನ್ಸ್ ನಡುವೆ ಹಣಾಹಣಿ ನಡೆಯಲಿದೆ.ಮೊದಲ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಲು ಹಾತೊರೆಯುತ್ತಿರುವ ಕ್ರೊವೇಷ್ಯಾ ಮತ್ತು ಎರಡನೇ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ಕಸನು ಹೊತ್ತಿರುವ ಫ್ರಾನ್ಸ್ ತಂಡಗಳತ್ತ ಈಗ ಎಲ್ಲರ ಚಿತ್ತ ಹರಿದಿದೆ. ಇಂದು ರಾತ್ರಿ 8.30 ಪಂದ್ಯ ಆರಂಭವಾಗಲಿದೆ.

ಜಿದ್ದಾಜಿದ್ದಿನ ಹೋರಾಟ
ಒಂದು ಬಾರಿ ವಿಶ್ವಕಪ್ ಗೆದ್ದಿರುವ ಫ್ರಾನ್ಸ್ ಆತ್ಮ ವಿಶ್ವಾಸದಿಂದ ಕಣಕ್ಕಿಳಿಯಲು ಸಜ್ಜಾಗಿದ್ದರೆ, ಮೊದಲ ಬಾರಿ ವಿಶ್ವಕಪ್ ಗೆಲ್ಲುವ ತವಕ ಕ್ರೊವೇಷ್ಯಾ ತಂಡದ್ದು.ತಂತ್ರಗಾರಿಕೆಯಲ್ಲಿ ಫ್ರಾನ್ಸ್ ತರಬೇತುದಾರಡೈಡಿಯರ್ ದೆಶ್ಚಾಂಪ್ಸ್ ಮತ್ತು ಕ್ರೊವೇಷ್ಯಾ ತರಬೇತುದಾರ ಝಟ್ಕೊ ಡಾಲಿಚ್ ಚಾಣಾಕ್ಷರಾಗಿದ್ದರೂ ಡೈಡಿಯರ್ಹೆಚ್ಚಿನ ಅನುಭವ ಹೊಂದಿದ್ದಾರೆ.

ಗೋಲ್ ಕೀಪರ್- ಫ್ರಾನ್ಸ್ ಬಲಿಷ್ಠ
ಫ್ರಾನ್ಸ್ ಗೋಲ್ ಕೀಪರ್ ಹ್ಯೂಗೊ ಲಾರಿಸ್ ಮತ್ತು ಕ್ರೊಯೇಷ್ಯಾ ಗೋಲ್ ಕೀಪರ್ ಡೆನಿಜಲ್ ಸುಭಾಸಿಕ್ ಉತ್ತಮ ಗೋಲ್ ಕೀಪರ್ ಗಳಾಗಿದ್ದರೂ, ಸುಭಾಸಿಕ್ಗೆ ಹೋಲಿಸಿದರೆ ಲಾರಿಸ್ ತಂತ್ರಗಾರಿಕೆಯಲ್ಲಿ ಮೇಲುಗೈ ಹೊಂದಿದ್ದಾರೆ.

ರಕ್ಷಣಾ ತಂತ್ರದಲ್ಲಿಯೂ ಫ್ರಾನ್ಸ್ ಮೇಲುಗೈ
ರಕ್ಷಣಾ ತಂತ್ರದಲ್ಲಿ ಮೇಲುಗೈ ಸಾಧಿಸಿದ ತಂಡವಾಗಿದೆ ಫ್ರಾನ್ಸ್.ಸೆಂಟ್ರಲ್ ಡಿಫೆನ್ಸ್ ನಲ್ಲಿ ಸಾಮ್ಯುವಲ್ ಉಮ್ಟಿಟಿ ಮತ್ತು ರಾಫೆಲ್ ವರಾನೆ ಜೋಡಿ ಬಲಿಷ್ಠವಾಗಿದೆ. ಅನುಭವಿಡಿಫೆನ್ಸಿವ್ ಮಿಡ್ ಫೀಲ್ಡರ್ಗಳ ಸಾನಿಧ್ಯದಿಂದಾಗಿ ರಕ್ಷಣಾ ತಂತ್ರದಲ್ಲಿ ಫ್ರಾನ್ಸ್ ಕ್ರೊವೇಷ್ಯಾಕ್ಕಿಂತ ಉತ್ತಮವಾಗಿದೆ.
ಫ್ರಾನ್ಸ್ ತಂಡ ಡಿಫೆನ್ಸಿವ್ ಮಿಡ್ ಫೀಲ್ಡ್ ನಲ್ಲಿ ಎನ್ ಗೊಲೊ ಕಾಂಟೆ ಮತ್ತು ಪೌಲ್ ಪೋಗ್ಬಾ ನುರಿತ ಆಟಗಾರರ ಜೋಡಿ ಇದೆ.ಆಟ್ಯಾಕಿಂಗ್ ಮಿಡ್ ಫೀಲ್ಡ್ ನಲ್ಲಿ ಕ್ರೊವೇಷ್ಯಾ ಬಲಿಷ್ಠವಾಗಿದೆ.

ಫ್ರಾನ್ಸ್ ಮತ್ತು ಕ್ರೊವೇಷ್ಯಾ ಈ ಹಿಂದೆ 5 ಬಾರಿ ಮುಖಾಮುಖಿಯಾಗಿದೆ.ಇದರಲ್ಲಿಫ್ರಾನ್ಸ್ ಮೂರು ಬಾರಿ (1998ಸ 1999, 2000) ಗೆದ್ದಿದ್ದು, 2 ಬಾರಿ ಪಂದ್ಯ (2004, 2011) ಡ್ರಾ ಆಗಿದೆ.

ಇದನ್ನೂ ಓದಿ

ಇತಿಹಾಸವೋ..ಪುನರಾವರ್ತನೆಯೋ..?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.