ಬ್ಯೂನಸ್ ಐರಿಸ್: ಕ್ರೊವೇಷ್ಯಾ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡ ಅನುಭವಿಸಿದ ಸೋಲು ಅರ್ಜೆಂಟೀನಾ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಉಂಟು ಮಾಡಿದೆ.

ವಿಶ್ವದ ಶ್ರೇಷ್ಠ ಆಟಗಾರ ಲಯೊನೆಲ್ ಮೆಸ್ಸಿ ಅವರ ಮೋಡಿಯ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ಈ ಪಂದ್ಯದ ಫಲಿತಾಂಶದಿಂದ ಆಘಾತಕ್ಕೊಳಗಾಗಿದ್ದಾರೆ.

‘ನಾವು ತೀರ ಕೆಟ್ಟದಾಗಿ ಸೋತೆವು. ಈ ಸೋಲು ನಮ್ಮ ತಂಡಕ್ಕಾದ ದೊಡ್ಡ ಅವಮಾನ. ಈ ವಿಶ್ವಕಪ್ ಟೂರ್ನಿಯಲ್ಲಿ ಉಳಿಯಬೇಕಾದರೆ ಮುಂದಿನ ಪಂದ್ಯ ಗೆಲ್ಲಬೇಕಿದೆ. ಜೊತೆಗೆ ಅನ್ಯ ತಂಡಗಳ ಫಲಿತಾಂಶಕ್ಕಾಗಿ ಕಾಯಬೇಕಿದೆ’ ಎಂದು ಇಲ್ಲಿನ ಜೊಯಾಕ್ವಿನ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಬಾರ್ಸಿಲೋನಾ ತಂಡವನ್ನು ಹಲವು ಬಾರಿ ಏಕಾಂಗಿ ಹೋರಾಟದಿಂದ ಗೆಲ್ಲಿಸಿರುವ ಮೆಸ್ಸಿ ಈ ಪಂದ್ಯದಲ್ಲಿ ಸರಿಯಾಗಿ ಆಡಲಿಲ್ಲ. ಪ್ರತಿ ಬಾರಿಯೂ ಅವರು ಅರ್ಜೆಂಟೀನಾ ತಂಡಕ್ಕೆ ನಿರಾಸೆ ಉಂಟು ಮಾಡಿದ್ದಾರೆ’ ಎಂದು ಮಿಗೆಲ್ ಏಂಜೆಲ್ ಅವರು ಹೇಳಿದ್ದಾರೆ.

ಕ್ಷಮೆ ಕೋರಿದ ಸ್ಯಾಂಪೊಲಿ: ಅರ್ಜೆಂಟೀನಾ ತಂಡದ ತರಬೇತುದಾರ ಜಾರ್ಜ್ ಸ್ಯಾಂಪೊಲಿ ಅವರು ತಂಡದ ಸೋಲಿಗೆ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.

‘ಅಷ್ಟು ದೂರದಿಂದ ತಂಡಕ್ಕೆ ಪ್ರೋತ್ಸಾಹಿಸಲು ರಷ್ಯಾಗೆ ಬಂದಅಭಿಮಾನಿಗಳಿಗೆ ಉಂಟಾದ ನಿರಾಸೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಈ ಸೋಲಿಗೆ ನಾನೇ ಕಾರಣ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.