ಏಂಗಲ್‌ವುಡ್ (ಅಮೆರಿಕ): ಕೋಸ್ಟರಿಕಾ ತಂಡದವರು ಕೋಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಪ್ರಬಲ ಬ್ರೆಜಿಲ್ ತಂಡದ ಜೊತೆ ಗೋಲಿಲ್ಲದೇ ಡ್ರಾ ಮಾಡಿಕೊಂಡು ಅಚ್ಚರಿಗೆ ಕಾರಣರಾದರು.

ಸೋಫಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಕೋಸ್ಟರಿಕಾ ತನ್ನ ಪ್ರಬಲ ರಕ್ಷಣೆಯಿಂದ ಫುಟ್‌ಬಾಲ್ ದಿಗ್ಗಜ ತಂಡಕ್ಕೆ ಗೋಲು ನಿರಾಕರಿಸಿತು. ಗೋಲ್‌ಕೀಪರ್ ಪ್ಯಾಟ್ರಿಕ್ ಸಿಕ್ವೇರಾ ಅವರು ಎದುರಾಳಿ ತಂಡದ ಕನಿಷ್ಠ ಮೂರು ಗೋಲು ಅವಕಾಶಗಳಿಗೆ ಗೋಡೆಯಾದರು. ಸತತ ನಾಲ್ಕನೇ ಪಂದ್ಯದಲ್ಲೂ ಕೋಸ್ಟರಿಕಾ ಅಜೇಯವಾಯಿತು.

67,000ಕ್ಕೂ ಹೆಚ್ಚು ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಈ ಪಂದ್ಯದಲ್ಲಿ ಬ್ರೆಜಿಲ್ ಪರ ಮಾರ್ಕ್ವಿನೋಸ್ 30ನೇ ನಿಮಿಷ ಗೋಲುಹೊಡೆದಿದ್ದರೂ ಮಾರ್ಕ್ವಿನೋಸ್ ವಿಡಿಯೊ ಮರುಪರಿಶೀಲನೆಯಲ್ಲಿ ಅದು ಅಫ್ ಸೈಡ್ ಆಗಿದ್ದರಿಂದ ಗೋಲು ನಿರಾಕರಿಸಲಾಯಿತು. ರಾಡ್ರಿಗೊ ಹೆಡ್ ಮಾಡಿದ ಚೆಂಡನ್ನು ಮಾರ್ಕ್ವಿನೋಸ್ ಬಲವಾಗಿ ಒದ್ದು ಗೋಲಿನೊಳಕ್ಕೆ ಕಳಿಸಿದ್ದರು.

ಇದನ್ನು ಬಿಟ್ಟರೆ 9 ಸಲದ ಕೊಪಾ ಅಮೆರಿಕ ಚಾಂಪಿಯ್ ತಂಡಕ್ಕೆ ಒಳ್ಳೆಯ ಅವಕಾಶ ಸಿಗಲಿಲ್ಲ. ಆದರೆ ಆ ತಂಡ ಬಹುತೇಕ ಅವಧಿಯಲ್ಲಿ ಚೆಂಡಿನ ಮೇಲೆ ನಿಯಂತ್ರಣ ಹೊಂದಿತ್ತು.

ಕೊಲಂಬಿಯಾಕ್ಕೆ ಜಯ:

ಕೊಲಂಬಿಯಾ ‘ಡಿ’ ಗುಂಪಿನ ಇನ್ನೊಂದು ಪಂದ್ಯದಲ್ಲಿ 2–1 ಗೋಲುಗಳಿಂದ ಪರಗ್ವೆ ತಂಡವನ್ನು ಮಣಿಸಿತು. ಆ ಮೂಲಕ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.

ಡೇನಿಯಲ್ ಮುನೋಜ್ ಮತ್ತು ಜೆಫರ್‌ಸನ್ ಲೆಮಾ ಅವರು ಕ್ರಮವಾಗಿ 32 ಮತ್ತು 42ನೇ ನಿಮಿಷ ಗೋಲು ಗಳಿಸಿದರು. ವಿರಾಮದ ನಂತರ, ಪಂದ್ಯದ 69ನೇ ನಿಮಿಷ ಜೂಲಿಯೊ ಎನ್ಸಿಸೊ ಪರಗ್ವೆ ತಂಡದ ಪರ ಏಕೈಕ ಗೋಲನ್ನು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.