ಸ್ಯಾನ್ ಇಸಿದ್ರೊ, ಅರ್ಜೆಂಟೀನಾ: ಫುಟ್ಬಾಲ್ ದಿಗ್ಗಜ ಡಿಯಾಗೊ ಮರಡೋನಾ ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಶುಶ್ರೂಷಕಿ ದಹಿಯಾನ ಗಿಸೇಲ ಮ್ಯಾಡ್ರಿಡ್ ಅವರ ಪರ ವಕೀಲ ಅಟಾರ್ನಿ ರುಡೊಲ್ಫೊ ಬೆಕ್ ಬುಧವಾರ ಹೇಳಿದ್ದಾರೆ.

ತನ್ನ ಬಳಿ ಕಾನೂನು ಸಲಹೆ ಪಡೆಯುತ್ತಿರುವ ಶುಶ್ರೂಷಕಿ ದಹಿಯಾನ ಮ್ಯಾಡ್ರಿಡ್ ಅವರನ್ನು ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಿದಾಗ ಈ ವಿಷಯ ಬಹಿರಂಗವಾಗಿದೆ ಎಂದುರುಡೊಲ್ಫೊ ಬೆಕ್ ತಿಳಿಸಿದ್ದಾರೆ.

60 ವರ್ಷ ಆಗಿದ್ದ ಮರಡೋನಾ ಮಿದುಳಿನ ಶಸ್ತ್ರಕ್ರಿಯೆಯ ನಂತರ ಹೃದಯಾಘಾತದಿಂದ ಕಳೆದ ವರ್ಷದ ನವೆಂಬರ್ನಲ್ಲಿ ಕೊನೆಯುಸಿರೆಳೆದಿದ್ದರು. ಅವರಿಗೆ ಸಮರ್ಪಕ ಚಿಕಿತ್ಸೆ ಸಿಗಲಿಲ್ಲ ಎಂಬ ಆರೋಪಹ ಹಿನ್ನೆಲೆಯಲ್ಲಿ ವಾಸ್ತವಾಂಶ ತಿಳಿಯಲು ತಜ್ಞರ ಸಮಿತಿಯೊಂದನ್ನು ರಚಿಸಲಾಗಿತ್ತು. ಅವರು ವಿಚಾರಣೆಗೆ ಒಳಪಡಿಸಿದವರ ಪೈಕಿ ದಹಿಯಾನ ಮ್ಯಾಡ್ರಿಡ್ ಕೂಡ ಒಬ್ಬರು.

‘ಮರಡೋನಾ ಸಾವಿನಲ್ಲಿ ದಹಿಯಾನ ಅವರ ಕೈವಾಡ ಇದೆ ಎಂಬ ಆರೋಪ ಇದೆ. ಆದರೆ ಅವರು ನಿರಪರಾಧಿಯಾಗಿದ್ದು ವೈದ್ಯರೇ ಮರಡೋನಾ ಅವರ ಸಾವಿಗೆ ಕಾರಣ. ಮಿದುಳಿನ ಶಸ್ತ್ರಚಿಕಿತ್ಸೆಯ ನಂತರ ಮರಡೋನಾ ಚೇತರಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಅವರ ಹೃದಯ ವೇಗವಾಗಿ ಕಾರ್ಯನಿರ್ವಹಿಸುವುದಕ್ಕಾಗಿ ಔಷಧೋಪಚಾರ ನಡೆಯುತ್ತಿತ್ತು’ ಎಂದು ರುಡೊಲ್ಫೊ ಬೆಕ್ ವಿವರಿಸಿದ್ದಾರೆ.

‘ಮರಡೋನಾ ಅವರು ಒಂದು ದಿನ ಆಸ್ಪತ್ರೆಯಲ್ಲಿ ಕುಸಿದು ಬಿದ್ದಿದ್ದರು. ಆದ್ದರಿಂದ ಅವರನ್ನು ಸಿಎಟಿ ಸ್ಕ್ಯಾನ್ಗೆ ಒಳಪಡಿಸಬೇಕು ಎಂದುದಹಿಯಾನ ಸೂಚಿಸಿದ್ದರು. ಆದರೆ ಈ ವಿಷಯ ಮಾಧ್ಯಮಗಳಿಗೆ ತಿಳಿದರೆ ಸಮಸ್ಯೆಯಾದೀತು ಎಂದು ಮರಡೋನಾ ಅವರ ಸಹವರ್ತಿಯೊಬ್ಬರು ಹೇಳಿದ್ದರು. ಮರಡೋನಾ ಅವರು ಸಾವಿನ ಕದ ತಟ್ಟುತ್ತಿದ್ದಾರೆ ಎಂಬುದಕ್ಕೆ ಅನೇಕ ಕುರುಹುಗಳಿದ್ದವು. ಹೀಗಿದ್ದೂ ವೈದ್ಯರು ಅವರನ್ನು ರಕ್ಷಿಸಲು ಮುಂದಾಗಲಿಲ್ಲ’ ಎಂದು ರುಡೊಲ್ಫೊ ಬೆಕ್ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.