ಸೋಚಿ:ಶನಿವಾರ ಫಿಶ್ತ್ ಕ್ರೀಡಾಂಗಣದಲ್ಲಿ 120 ನಿಮಿಷಗಳಲ್ಲಿ ಜಿದ್ದಾಜಿದ್ದಾಯಲ್ಲಿ ಪೆನಾಲ್ಟಿ ಶೂಟ್ಔಟ್ನಲ್ಲಿ ಕ್ರೊವೇಷ್ಯಾ, ಆತಿಥೇಯ ರಷ್ಯಾ ತಂಡದ ಎಲ್ಲ ಕನಸುಗಳನ್ನು ತೂರಿತು. 2018ರ ಫಿಫಾ ವಿಶ್ವಕಪ್ ಪಂದ್ಯಗಳಿಂದ ರಷ್ಯಾ ಹೊರಗುಳಿಯಿತು.

ಕ್ವಾರ್ಟರ್ ಫೈನಲ್ನಲ್ಲಿ ರಷ್ಯಾ ತಂಡವನ್ನು ಮಣಿಸುವ ಮೂಲಕ 1998ರಿಂದ ಇದೇ ಮೊದಲ ಬಾರಿಗೆ ಕ್ರೊವೇಷ್ಯಾ ಸೆಮಿ ಫೈನಲ್ ಹಂತ ಪ್ರವೇಶಿಸಿದೆ. 16ರ ಘಟ್ಟದಲ್ಲಿ ಡೆನ್ಮಾರ್ಕ್ ವಿರುದ್ಧ ಪೆನಾಲ್ಟಿ ಶೂಟ್ಔಟ್ನಲ್ಲಿ ಗೆಲುವು ಪಡೆದಿದ್ದ ಈ ತಂಡ ತನ್ನ ಜಯಭೇರಿಯನ್ನು ಮುಂದುವರಿಸಿತು. 1990ರಲ್ಲಿ ಅರ್ಜೆಂಟೀನಾದ ಸಾಧನೆ ನಂತರ ಪೆನಾಲ್ಟಿ ಅವಕಾಶದಲ್ಲಿ ಸತತ ಜಯ ಗಳಿಸಿರುವ ದಾಖಲೆ ಕ್ರೊವೇಷ್ಯಾ ಮಾಡಿದೆ.

ಅಧಿಕ ಸಮಯದ ಬಳಿಕವೂ 2–2 ಸಮಬಲ ಸಾಧಿಸಿದ ತಂಡವು ಪೆನಾಲ್ಟಿ ಶೂಟ್ಔಟ್ನಲ್ಲಿ ಸಾಮರ್ಥ್ಯ ಸಾಬೀತಿಗೆ ನಿಂತವು. ಅಂತಿಮವಾಗಿ ಕ್ರೊವೇಷ್ಯಾ 4–3 ಗೋಲುಗಳ ಅಂತರದಿಂದ ರಷ್ಯಾ ತಂಡವನ್ನು ಮಣಿಸಿತು. ಬುಧವಾರ ನಡೆಯಲಿರುವ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕ್ರೊವೇಷ್ಯಾ ಸೆಣಸಲಿದೆ.

ಉಭಯ ತಂಡಗಳ ಬಲಾಬಲದ ನಡುವೆ ಕುತೂಹಲ ಇಮ್ಮಡಿಸಿದ್ದ ಪಂದ್ಯವನ್ನು ಇವಾನ್ ರಕಿಟಿಕ್ ಹೊಡೆತ ಕ್ರೊವೇಷ್ಯಾ ಕಡೆಗೆ ಒಲಿಸಿತು. ಇದಕ್ಕೂ ಮುನ್ನ ಪೆನಾಲ್ಟಿಯ ಹೊಡೆತಗಳನ್ನು ಎರಡೂ ತಂಡದ ಗೋಲ್ ಕೀಪರ್ಗಳು ತಡೆದು ಪೈಪೋಟಿ ನೀಡಿದ್ದರು. ಆದರೆ, ಮೂರನೇ ಅವಕಾಶದಲ್ಲಿ ಮಾರಿಯೊ ಫರ್ನಾಂಡಿಸ್ ಹೊಡೆದ ಹೊಡೆತ ಗೋಲ್ನಿಂದ ಬಹುದೂರ ಹೋಗುತ್ತಿದ್ದಂತೆ ರಷ್ಯಾ ಗೆಲುವಿನ ಆಸೆ ಮುರುಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.