ಕೊಚ್ಚಿ: ಭಾರತ ಫುಟ್ಬಾಲ್ ತಂಡದ ಮಾಜಿ ಆಟಗಾರ ಮತ್ತು ತರಬೇತುದಾರ ಟಿ.ಕೆ.ಚತುನ್ನಿ (79) ಅವರು ಬುಧವಾರ ನಿಧನರಾದರು.

ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು

ಕೇರಳ ಮತ್ತು ಗೋವಾ ತಂಡದಲ್ಲಿ ಪ್ರತಿಷ್ಟಿತ ಸಂತೋಷ್ ಟ್ರೋಫಿ ಫುಟ್ಬಾಲ್ ಪಂದ್ಯದಲ್ಲಿ ಗೋಲ್ಕೀಪರ್ ಆಗಿ ಆಟವಾಡಿದ್ದರು. ಭಾರತೀಯ ಫುಟ್ಬಾಲ್ನ ಅತ್ಯುತ್ತಮ ತರಬೇತುದಾರರಲ್ಲಿ ಒಬ್ಬರಾದ ಚತುನ್ನಿ ಅವರು 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 1979 ರಲ್ಲಿ ಅವರು ಕೇರಳದ ಸಂತೋಷ್ ಟ್ರೋಫಿ ತಂಡದ ತರಬೇತುದಾರರಾಗಿದ್ದರು. ಜತೆಗೆ ಮೋಹನ್ ಬಗಾನ್, ಡೆಂಪೊ ಗೋವಾ ಮತ್ತು ಎಫ್ಸಿ ಕೊಚ್ಚಿನ್ ಸೇರಿದಂತೆ ಹಲವಾರು ಪ್ರಸಿದ್ಧ ತಂಡಗಳಿಗೆ ತರಬೇತಿ ನೀಡಿದ್ದರು.

ಚತುನ್ನಿ ಅವರು ‘ಫುಟ್ಬಾಲ್ ಮೈ ಸೋಲ್’ ಎಂಬ ಆತ್ಮಚರಿತ್ರೆಯನ್ನೂ ಬರೆದಿದ್ದಾರೆ.

ಚತುನ್ನಿ ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.