ಬೆಂಗಳೂರು: ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯು 2023-24ರ ಹೀರೊ ಜೂನಿಯರ್ ಬಾಲಕಿಯರ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್‌ಗಾಗಿ 15 ವರ್ಷದೊಳಗಿನ ಬಾಲಕಿಯರ ಟ್ರಯಲ್ಸ್‌ಗೆ ಆಹ್ವಾನ ನೀಡಿದೆ.

ಆಟಗಾರರು 2007 ಜನವರಿ 1ರಿಂದ 2009 ಡಿಸೆಂಬರ್ 31ರ ಅವಧಿಯಲ್ಲಿ ಜನಿಸಿರಬೇಕು. ಅವರು ಸ್ಥಳೀಯ ಜಿಲ್ಲಾ ಲೀಗ್‌ನಲ್ಲಿ ಅಥವಾ ರಾಜ್ಯ ಮಟ್ಟದಲ್ಲಿ ಶಾಲೆಗಾಗಿ (ಪ್ರಮಾಣಪತ್ರ ಸಲ್ಲಿಸಬೇಕು) ಅಥವಾ ಹಿಂದೆ ಕೆ.ಎಸ್.ಎಫ್.ಎ ಮಹಿಳಾ ಲೀಗ್‌ಗಳ ಯಾವುದೇ ವಿಭಾಗದಲ್ಲಿ ಆಡಿರಬೇಕು.

ಕರ್ನಾಟಕದ ಸ್ಥಳೀಯ ಪುರಸಭೆಗಳು ನೀಡುವ ಡಿಜಿಟಲ್ ಜನನ ಪ್ರಮಾಣ ಪತ್ರಗಳು ಮಾತ್ರ ಪರಿಗಣಿಸಲಾಗುತ್ತದೆ. ಕೈಬರಹದ ಜನನ ಪ್ರಮಾಣಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಸರು ಮತ್ತು ಇತರ ಮಾಹಿತಿಯಲ್ಲಿ ವ್ಯತ್ಯಾಸಗಳಿದ್ದರೆ ಪ್ರಮಾಣಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.

ಈ ಷರತ್ತುಗಳನ್ನು ಪೂರೈಸುವ ಆಟಗಾರರು ದಾಖಲೆಗಳೊಂದಿಗೆ ceoksfa@gmail.com ಗೆ ಸೆ.2ರೊಳಗೆ ಇಮೇಲ್ ಕಳುಹಿಸಬಹುದು ಎಂದು ಕೆಎಸ್‌ಎಫ್‌ಎ ಪ್ರಧಾನ ಕಾರ್ಯದರ್ಶಿ ಎಂ.ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.