ಪ್ಯಾರಿಸ್: ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡದ ಲಯೊನೆಲ್ ಮೆಸ್ಸಿ ಅವರಿಗೆ ಸೋಮವಾರ ಫಿಫಾ ವರ್ಷದ ಶ್ರೇಷ್ಠ ಫುಟ್ಬಾಲ್ ಆಟಗಾರ ಗೌರವ ಒಲಿದಿದೆ.

ಸ್ಪೇನ್ ಮಹಿಳಾ ತಂಡದ ಅಲೆಕ್ಸಿಯಾ ಪುಟೆಲ್ಲಾಸ್ ಅವರು ಸತತ ಎರಡನೇ ವರ್ಷ ಶ್ರೇಷ್ಠ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಕತಾರ್ನಲ್ಲಿ ಕಳೆದ ವರ್ಷ ನಡೆದ ಪುರುಷರ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ಫ್ರಾನ್ಸ್ ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸಿತ್ತು.

ಶ್ರೇಷ್ಠ ಆಟಗಾರ ಸ್ಪರ್ಧೆಯಲ್ಲಿ ಮೆಸ್ಸಿ ಅವರು ಫ್ರಾನ್ಸ್ನ ಕಿಲಿಯನ್ ಎಂಬಾಪೆ ಮತ್ತು ಕರೀಂ ಬೆಂಜೆಮಾ ಅವರನ್ನು ಹಿಂದಿಕ್ಕಿದ್ದಾರೆ. ಇದರೊಂದಿಗೆ 14 ವರ್ಷಗಳಲ್ಲಿ ಏಳನೇ ಬಾರಿ ಈ ಗೌರವ ತಮ್ಮದಾಗಿಸಿಕೊಂಡಿದ್ದಾರೆ.

ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗಾಗಿ ಪುಟೆಲ್ಲಾಸ್ ಅವರ ಜೊತೆಗೆ ಅಮೆರಿಕದ ಅಲೆಕ್ಸ್ ಮಾರ್ಗನ್ ಮತ್ತು ಇಂಗ್ಲೆಂಡ್ನ ಬೆಥ್ ಮೀಡ್ ಸ್ಪರ್ಧೆಯಲ್ಲಿದ್ದರು. ಅರ್ಜೆಂಟೀನಾ ತಂಡದ ಲಯೊನೆಲ್ ಸ್ಕಾಲೊನಿ ಅವರು ಪುರುಷರ ತಂಡದ ಶ್ರೇಷ್ಠ ಕೋಚ್ ಗೌರವ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.