ಬೆಲ್ಜಿಯಂ : ಬೆಲ್ಜಿಯಂ ಮೂಲದ ಗೋಲ್‌ಕೀಪರ್ ಆರ್ನೆ ಎಸ್ಪೀಲ್ (25) ಟೂರ್ನಿಯೊಂದರಲ್ಲಿ ವಿಂಕಲ್ ಸ್ಪೋರ್ಟ್ಸ್ ಬಿ ತಂಡದ ಪರವಾಗಿ ಆಡುವಾಗಲೇ ಸಾವನ್ನಪಿದರು. ಕೊನೆಯುಸಿರೆಳೆಯುವ ಮುನ್ನ ಅವರು ಎದುರಾಳಿ ತಂಡವು ಪೆನಾಲ್ಟಿಯಲ್ಲಿ ಗೋಲು ಗಳಿಸುವ ಅವಕಾಶವನ್ನು ವಿಫಲಗೊಳಿಸಿದರು.

ಬೆಲ್ಜಿಯಂ ಪಶ್ಚಿಮ ಬ್ರೆಬಾಂಟ್ ಎರಡನೇ ಪ್ರಾಂತ ವಿಭಾಗದಲ್ಲಿರುವ ಕ್ಲಬ್ ತವರಿನಂಗಳದಲ್ಲಿ ನಡೆದ ಪಂದ್ಯದಲ್ಲಿ ವಿಂಕೆಲ್ 2–1ರಿಂದ ವೆಸ್ಟರೊಜೆಬೆಕೆ ವಿರುದ್ಧ ಮುನ್ನಡೆಯಲ್ಲಿತ್ತು. ದ್ವಿತೀಯಾರ್ಧದಲ್ಲಿ ವೆಸ್ಟರೊಜೆಬೆಕೆಗೆ ಪೆನಾಲ್ಟಿ ದೊರೆಯಿತು.

‘ಎದುರಾಳಿ ತಂಡದ ಆಟಗಾರ ಮಾಡಿದ ಕಿಕ್ ಅನ್ನು ತಡೆಯುವಲ್ಲಿ ಯಶಸ್ವಿಯಾದ ಎಸ್ಪೀಲ್ ನೆಲಕ್ಕೆ ಕುಸಿದರು. ತುರ್ತು ವೈದ್ಯಕೀಯ ತಂಡದ ಸಿಬ್ಬಂದಿಯು ಧಾವಿಸಿತು. ಅವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಅವರು ಅಷ್ಟರಲ್ಲೇ ಕೊನೆಯುಸಿರೆಳೆದಿದ್ದರು’ ಎಂದು ಬೆಲ್ಜಿಯಂ ಮಾಧ್ಯಮಗಳು ವರದಿ ಮಾಡಿವೆ.

ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಅವರ ಸಾವಿನ ಕಾರಣ ತಿಳಿಯಲಿದೆ ಎಂದು ಮೂಲಗಳು ಹೇಳಿವೆ.

‘ಆರ್ನೆ ಎಸ್ಪಿಲ್ ಹಠಾತ್ ಅಗಲಿಕೆಯು ಆಘಾತ ತಂದಿದೆ’ ಎಂದು ಕ್ಲಬ್ ಪ್ರಕಟಣೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.