ಕೋಲ್ಕತ್ತ/ ನವದೆಹಲಿ: ದಿಗ್ಗಜ ಆಟಗಾರ ಪೆಲೆ ಅವರು ಭಾರತದಲ್ಲೂ ತಮ್ಮ ಕಾಲ್ಚಳಕ ಮೆರೆದಿದ್ದರು. 1977ರ ಸೆಪ್ಟೆಂಬರ್ 24 ರಂದು ಕೋಲ್ಕತ್ತದಲ್ಲಿ ಆಡಿದ್ದರಲ್ಲದೆ, ಅಭಿಮಾನಿಗಳ ಮನಗೆದ್ದಿದ್ದರು.

ನ್ಯೂಯಾರ್ಕ್ ಕಾಸ್ಮೊಸ್ ತಂಡದ ಜತೆ ಬಂದಿದ್ದ ಅವರು ಮೋಹನ್ ಬಾಗನ್ ವಿರುದ್ಧದ ಪ್ರದರ್ಶನ ಪಂದ್ಯದಲ್ಲಿ ಆಡಿದ್ದರು. ಕಾಸ್ಮೊಸ್ ತಂಡದಲ್ಲಿ ಪೆಲೆ ಅಲ್ಲದೆ ಬ್ರೆಜಿಲ್ನ ಕಾರ್ಲೊಸ್ ಅಲ್ಬರ್ಟೊ ಮತ್ತು ಇಟಲಿಯ ಜಾರ್ಜೊ ಕಿನಾಗ್ಲಿಯಾ ಅವರೂ ಇದ್ದರು.

ಪೆಲೆ ಅವರ ಭೇಟಿ ಕೋಲ್ಕತ್ತದ ಫುಟ್ಬಾಲ್ ಪ್ರೇಮಿಗಳಲ್ಲಿ ರೋಮಾಂಚನ ಸೃಷ್ಟಿಸಿತ್ತು. ಅವರನ್ನು ಸ್ವಾಗತಿಸಲು ಕೋಲ್ಕತ್ತ ವಿಮಾನ ನಿಲ್ದಾಣದ ಹೊರಗೆ ಸಾವಿರಾರು ಅಭಿಮಾನಿಗಳು ನೆರೆದಿದ್ದರು.

ಇದನ್ನೂ ಓದಿ:ಫುಟ್ಬಾಲ್ ದಿಗ್ಗಜ ಪೆಲೆ ಇನ್ನಿಲ್ಲ

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯವನ್ನು 80 ಸಾವಿರಕ್ಕೂ ಅಧಿಕ ಪ್ರೇಕ್ಷಕರು ವೀಕ್ಷಿಸಿದ್ದರು. ಆ ಪಂದ್ಯದಲ್ಲಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ಆಡಿದ್ದ ಪೆಲೆ ಅವರಿಗೆ ಗೋಲು ಗಳಿಸಲು ಆಗಿರಲಿಲ್ಲ. ಪಂದ್ಯ 2–2 ಗೋಲುಗಳ ಡ್ರಾದಲ್ಲಿ ಕೊನೆಗೊಂಡಿತ್ತು.

ಆಗ 37 ವರ್ಷ ವಯಸ್ಸಾಗಿದ್ದ ಅವರು ವೃತ್ತಿಜೀವನದ ಸಂಧ್ಯಾಕಾಲದಲ್ಲಿದ್ದರು. ಕೋಲ್ಕತ್ತದಲ್ಲಿ ಆಡಿದ ಪಂದ್ಯದ ಬಳಿಕ ಕೆಲವೇ ಪಂದ್ಯಗಳನ್ನು ಆಡಿ ವೃತ್ತಿಪರ ಫುಟ್ಬಾಲ್ಗೆ ನಿವೃತ್ತಿ ಪ್ರಕಟಿಸಿದ್ದರು.

2015, 2018 ರಲ್ಲೂ ಭೇಟಿ: ಪೆಲೆ ಅವರ ಭಾರತದ ಎರಡನೇ ಭೇಟಿ 2015ರ ಅಕ್ಟೋಬರ್ನಲ್ಲಿ ನಡೆದಿತ್ತು. ಒಂದು ವಾರ ಇಲ್ಲಿ ತಂಗಿದ್ದ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಕೋಲ್ಕತ್ತದಲ್ಲಿ ಅವರು ಮೂರು ದಿನ ಇದ್ದರು.

ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆದಿದ್ದ ಅಟ್ಲೆಟಿಕೊ ಡಿ ಕೋಲ್ಕತ್ತ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳ ನಡುವಿನ ಐಎಎಸ್ ಫುಟ್ಬಾಲ್ ಟೂರ್ನಿಯ ಪಂದ್ಯವನ್ನು ವೀಕ್ಷಿಸಿದ್ದರು.

ಇದನ್ನೂ ಓದಿ:ಪೆಲೆ ಜತೆಗೊಂದು ಔತಣಕೂಟ: ನೆನಪು ಬಿಚ್ಚಿಟ್ಟ ಬೆಂಗಳೂರಿನ ಫುಟ್ಬಾಲ್ ಆಟಗಾರ

ಪೆಲೆ ಅವರ 75ನೇ ಹುಟ್ಟುಹಬ್ಬವನ್ನು 10 ದಿನ ಮುಂಚಿತವಾಗಿಯೇ ಆಚರಿಸಲಾಗಿತ್ತು. ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕ್ರಿಕೆಟಿಗ ಸೌರವ್ ಗಂಗೂಲಿ ಒಳಗೊಂಡಂತೆ ಗಣ್ಯರು ಭಾಗವಹಿಸಿದ್ದರು.

ಆ ಬಳಿಕ ನವದೆಹಲಿಗೆ ತೆರಳಿದ್ದರಲ್ಲದೆ, ಎರಡು ದಿನ ತಂಗಿದ್ದರು. ನವದೆಹಲಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದಿದ್ದ ಸುಬ್ರತೊ ಕಪ್ 17 ವರ್ಷದೊಳಗಿನವರ ಬಾಲಕರ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯವನ್ನು ವೀಕ್ಷಿಸಿದ್ದರು. ಮಾಧ್ಯಮ ಸಂಸ್ಥೆಯೊಂದು ಏರ್ಪಡಿಸಿದ್ದ ‘ನಾಯಕತ್ವ ಶೃಂಗ’ದಲ್ಲಿ ಪಾಲ್ಗೊಳ್ಳಲು 2018 ರಲ್ಲಿ ಅವರು ಮತ್ತೊಮ್ಮೆ ನವದೆಹಲಿಗೆ ಭೇಟಿಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.