ದುಬೈ: ಭಾರತದ ಗಾಲ್ಫ್ ಪಟು ಅದಿತಿ ಅಶೋಕ್ ಅವರು ದುಬೈ ಮೂನ್‌ಲೈಟ್ ಕ್ಲಾಸಿಕ್ ಟೂರ್ನಿಯಲ್ಲಿ ಅಂತಿಮ 69ನೇ ಸುತ್ತಿನಲ್ಲಿ ಜಂಟಿ 13ನೇ ಸ್ಥಾನ ಗಳಿಸಿದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ಕರ್ನಾಟಕದ ಅದಿತಿ, ಇಲ್ಲಿ ನಡೆಯುತ್ತಿರುವ ಮಹಿಳೆಯರ ಯೂರೋಪಿಯನ್ ಟೂರ್‌ನ (ಎಲ್‌ಇಟಿ) ಟೂರ್ನಿಯಲ್ಲಿ ಭಾರತ ಆಟಗಾರ್ತಿಯರ ಪೈಕಿ ಮೊದಲ ಸ್ಥಾನ ಪಡೆದರು.

ಭಾರತದ ಇನ್ನೋರ್ವ ಆಟಗಾರ್ತಿ ತ್ವೇಷಾ ಮಲಿಕ್ ಜಂಟಿ 19ನೇ ಸ್ಥಾನ ಗಳಿಸಿದರೆ, ದೀಕ್ಷಾ ದಾಗರ್ 24ನೇ ಸ್ಥಾನ ಪಡೆದರು.

ಇಂಗ್ಲೆಂಡ್‌ನ ಬ್ರೊಂಟೆ ಲಾ ಅಗ್ರಸ್ಥಾನದಲ್ಲಿದ್ದರು. ಮೆಕ್ಸಿಕೊದ ಮರಿಯಾ ಫಾಸ್ಸಿ ಮತ್ತು ಜರ್ಮನಿಯ ಈಸ್ತರ್ ಹೆನ್ಸೆಲೆಟ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.