ಅಲ್ ರಯ್ಯಾನ್ (ಕತಾರ್): ಹೋರಾಟ ತೋರಿದರೂ ಭಾರತ ತಂಡ, ಎಎಫ್ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಶನಿವಾರ ಪ್ರಬಲ ಆಸ್ಟ್ರೇಲಿಯಾ ಎದುರು 0–2 ಗೋಲುಗಳಿಂದ ಸೋಲನುಭವಿಸಿತು.

ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಜಾಕ್ಸನ್ ಇರ್ವಿನ್ (50ನೇ ನಿಮಿಷ) ಮತ್ತು ಜೋರ್ಡಾನ್ ಬ್ರದರ್ಸ್ (73ನೇ ನಿಮಿಷ) ಗೋಲು ಗಳಿಸಿದರು. ಮೊದಲ 50 ನಿಮಿಷ ಬಲಿಷ್ಠ ಆಸ್ಟ್ರೇಲಿಯಾಕ್ಕೆ ಗೋಲು ನಿರಾಕರಿಸಿದ್ದು ಭಾರತ ಹೋರಾಟಕ್ಕೆ

ಆಸ್ಟ್ರೇಲಿಯಾ ಈ ಪಂದ್ಯ ಗೆಲ್ಲುವ ಫೇವರಿಟ್ ತಂಡವಾಗಿತ್ತು. ಆದರೆ, ಸುನಿಲ್ ಚೆಟ್ರಿ ನೇತೃತ್ವದ ತಂಡ ಮೊದಲಾರ್ಧ ಮತ್ತು ದ್ವಿತೀರ್ಯಾಧದ ಐದು ನಿಮಿಷಗಳ ಬಳಿಕ ಅತ್ಯುತ್ತಮ ರಕ್ಷಣಾತ್ಮಕ ಆಟವಾಡಿತು.

ಮೊದಲ 45 ನಿಮಿಷಗಳ ಕಾಲ ನಾಯಕ ಸುನಿಲ್ ಸೇರಿದಂತೆ ಎಲ್ಲಾ ಆಟಗಾರರು ರಕ್ಷಣಾತ್ಮಕ ಆಟವಾಡಿದರು. ಭಾರತದ ಆಟಗಾರರು ಗೋಲು ಗಳಿಸಲು ಯತ್ನಿಸದ ಕಾರಣ ಆಸ್ಟ್ರೇಲಿಯಾ ತಂಡದ ನಾಯಕ, ಗೋಲ್ ಕೀಪರ್ ಮ್ಯಾಥ್ಯು ರಯಾನ್ ಅವರು ಮೈದಾನದ ಮಧ್ಯದ ರೇಖೆ ಬಳಿ ನಿಂತು ಮೊದಲಾರ್ಧದ ಹೆಚ್ಚಿನ ಸಮಯ ತಂಡದ ಆಟಗಾರರನ್ನು ಹುರಿದುಂಬಿಸಿದರು.

16ನೇ ನಿಮಿಷದಲ್ಲಿ ಗೋಲು ಗಳಿಸಲು ಭಾರತಕ್ಕೆ ಒಂದು ಸುವರ್ಣಾವಕಾಶ ಸಿಕ್ಕಿತು. ಆದರೆ ಚೆಟ್ರಿ ಅದನ್ನು ತಪ್ಪಿಸಿಕೊಂಡರು.

ಭಾರತ ತನ್ನ ಗುಂಪಿನ ಎರಡನೇ ಪಂದ್ಯವನ್ನು ಇದೇ 18 ರಂದು ಉಜ್ಬೇಕಿಸ್ತಾನ ಎದುರು ಆಡಲಿದೆ. ಆರು ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಮತ್ತು ಉತ್ತಮ ಪ್ರದರ್ಶನ ನೀಡಿ ಮೂರನೇ ಸ್ಥಾನ ಗಳಿಸಿದ ನಾಲ್ಕು ತಂಡಗಳು 16ರ ಘಟ್ಟಕ್ಕೆ ಪ್ರವೇಶಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.