ನವದೆಹಲಿ: ದೆಹಲಿ ಪ್ರೀಮಿಯರ್ ಲೀಗ್ನಲ್ಲಿ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಮಂಗಳವಾರ ದೇಶದ ವಿವಿಧ ನಗರಗಳಲ್ಲಿ ತನಿಖೆ ಪ್ರಾರಂಭಿಸಿದೆ.

ದೆಹಲಿ ಲೀಗ್ನಲ್ಲಿ ಸೋಮವಾರ ಅಹಬಾಬ್ ಎಫ್ಸಿ– ರೇಂಜರ್ಸ್ ಎಫ್ಸಿ ನಡುವೆ ಪಂದ್ಯದಲ್ಲಿ ಅಹಬಾಬ್ ಗೆದ್ದ ರೀತಿ ಸಂಶಯ ಮೂಡಿಸಿತ್ತು. 4-0 ಗೋಲುಗಳಿಂದ ಮುನ್ನಡೆಯಲ್ಲಿದ್ದ ಅಹಬಾಬ್ ಎಫ್ಸಿ, ಕೊನೆಗಳಿಗೆಯಲ್ಲಿ ಎರಡು ಸೆಲ್ಫ್ (ಉಡುಗೊರೆ) ಗೋಲುಗಳನ್ನು ಕೊಟ್ಟ ರೀತಿ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಅನುಮಾನಗಳಿಗೆ ಪುಷ್ಠಿ ನೀಡಿದೆ. ಪಂದ್ಯವನ್ನು ಅಹಬಾಬ್ ಎಫ್ಸಿ 4–2ರಿಂದ ಗೆದ್ದುಕೊಂಡಿತ್ತು.

ಎರಡು ಗೋಲುಗಳ ವಿಡಿಯೊ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪಂದ್ಯದ ವಿವರಗಳನ್ನು ಪಡೆಯಲು ಎಐಎಫ್ಎಫ್ ಮಂಗಳವಾರ ಫುಟ್ಬಾಲ್ ದೆಹಲಿ ಮುಖ್ಯಸ್ಥ ಅನುಜ್ ಗುಪ್ತಾ ಅವರನ್ನು ಕರೆಸಿಕೊಂಡು ಮಾಹಿತಿ ಪಡೆದು ನೋಟಿಸ್ ನೀಡಿದೆ.

ಬೆಟ್ಟಿಂಗ್ ಸಿಂಡಿಕೇಟ್ಅನ್ನು ಬುಡಸಮೇತ ನಿರ್ಮೂಲನ ಮಾಡುವ ನಿಟ್ಟಿನಲ್ಲಿ ತನಿಖೆಗೆ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಸಂಪರ್ಕಿಸುವುದಾಗಿ ಎಐಎಫ್ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಹೇಳಿದ್ದಾರೆ.

‘ನಮ್ಮ ತನಿಖೆ ದೆಹಲಿಗೆ ಮಾತ್ರ ಸೀಮಿತಗೊಂಡಿಲ್ಲ. ಇತರ ನಗರಗಳಲ್ಲೂ ಇಂಥ ಪಿಡುಗು ಇದೆ ಎಂಬುದನ್ನು ನಂಬಲು ಕಾರಣವಾಗುವ ಸಾಕ್ಷ್ಯಗಳು ನಮ್ಮ ಬಳಿಯಿವೆ. ತನಿಖೆಗಾಗಿ ವ್ಯಾಪಕ ಜಾಲವನ್ನು ರೂಪಿಸುತ್ತಿದ್ದೇವೆ’ ಎಂದು ಚೌಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.