ನವದೆಹಲಿ: ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಅಮಿತ್ ಪಂಘಲ್ ಭಾರತದ ಸವಾಲನ್ನು ಮುನ್ನಡೆಸುವರು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಪಂಘಲ್ ಅವರು ಚಾಂಪಿಯನ್‌ಷಿಪ್‌ಗೆ ನೇರ ಅರ್ಹತೆ ಪಡೆದಿದ್ದಾರೆ. ರಷ್ಯಾದಲ್ಲಿ ಸೆಪ್ಟೆಂಬರ್ 7ರಿಂದ ಟೂರ್ನಿ ಆರಂಭವಾಗಲಿದೆ.

ಮನೀಷ್ ಕೌಶಿಕ್ (63 ಕೆಜಿ ವಿಭಾಗ) ಅವರು ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ ಶಿವ ಥಾಪಾ ಅವರನ್ನು ಹಿಂದಿಕ್ಕಿ,ಭಾರತದಎಂಟು ಬಾಕ್ಸರ್‌ಗಳ ಬಲಿಷ್ಠ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕವಿಂದರ್ ಸಿಂಗ್ ಬಿಷ್ತ್ (57 ಕೆಜಿ ವಿಭಾಗ), ದುರ್ಯೋಧನ ಸಿಂಗ್ ನೇಗಿ (69 ಕೆಜಿ), ಆಶಿಷ್ ಕುಮಾರ್ (75 ಕೆಜಿ), ಬ್ರಿಜೇಶ್ ಯಾದವ್ (81 ಕೆಜಿ), ಸಂಜೀತ್ (91 ಕೆಜಿ) ಮತ್ತು ಸತೀಶ್ ಕುಮಾರ್ (+91 ಕೆಜಿ) ಅವರು ಪಟಿಯಾಲಾದಲ್ಲಿ ನಡೆದ ಟ್ರಯಲ್ಸ್ ಮೂಲಕ ತಂಡಕ್ಕೆ ಆಯ್ಕೆಯಾದವರು.

57 ಕೆಜಿ ವಿಭಾಗದಲ್ಲಿ ಏಷ್ಯನ್ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತ ಕವಿಂದರ್ ಅವರು ಮೊಹಮ್ಮದ್ ಹುಸ್ಸಾಮುದ್ದೀನ್ ಅವರನ್ನು ಮಣಿಸಿದ್ದರು. 75 ಕೆಜಿ ವಿಭಾಗದಲ್ಲಿ ಆಶೀಸ್ ಕುಮಾರ್ ಅವರು ಪ್ರಯಾಗ್ ಚೌಹಾನ್ ಅವರ ಸವಾಲು ಮೀರಿದ್ದರು. ದುರ್ಯೋಧನ ಅವರು 69 ಕೆಜಿ ವಿಭಾಗದಲ್ಲಿ ಆಶೀಸ್ ಕುಲ್ಹಾರಿ ಅವರನ್ನು ಸೋಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.