ಕ್ಲಿಫ್ಟನ್, ನ್ಯೂಜೆರ್ಸಿ : ಬೆಂಗಳೂರಿನ ಅದಿತಿ ಅಶೋಕ್ ಅವರು ಎಲ್ಪಿಜಿಎ ಟೂರ್ ‘ಕಾಗ್ನಿಜೆಂಟ್ ಫೌಂಡರ್ಸ್ ಕಪ್’ ಗಾಲ್ಫ್ ಟೂರ್ನಿಯಲ್ಲಿ ಜಂಟಿ ಐದನೇ ಸ್ಥಾನ ಪಡೆದರು.

ಇಲ್ಲಿನ ಅಪ್ಪರ್ ಮಾಂಟ್ಕ್ಲೇರ್ ಕಂಟ್ರಿ ಕ್ಲಬ್ ಕೋರ್ಸ್ನಲ್ಲಿ ಭಾನುವಾರ ಕೊನೆಗೊಂಡ ಟೂರ್ನಿಯಲ್ಲಿ ಅದಿತಿ ಅವರು ಒಟ್ಟು 281 ಸ್ಕೋರ್ ಮಾಡಿದರು.

ಕೊನೆಯ ಸುತ್ತಿನಲ್ಲಿ ನಿಖರ ಪ್ರದರ್ಶನ ನೀಡುವಲ್ಲಿ ವಿಫಲರಾದ ಅವರು 73 ಸ್ಟ್ರೋಕ್ಗಳನ್ನು ತೆಗೆದುಕೊಂಡರು. ಮೊದಲ ಮೂರು ಸುತ್ತುಗಳನ್ನು ಕ್ರಮವಾಗಿ 69, 68, 71 ಸ್ಟ್ರೋಕ್ಗಳೊಂದಿಗೆ ಕೊನೆಗೊಳಿಸಿದ್ದರು.

ಎಲ್ಪಿಜಿಎ ಟೂರ್ನಲ್ಲಿ ಚೊಚ್ಚಲ ಪ್ರಶಸ್ತಿಗಾಗಿ ಅವರ ಕಾಯುವಿಕೆ ಮುಂದುವರಿಯಿತು. ಅದಿತಿ ಕಳೆದ ಏಳು ವರ್ಷಗಳಿಂದ ಎಲ್ಪಿಜಿಎ ಟೂರ್ನಲ್ಲಿ ಆಡುತ್ತಿದ್ದಾರೆ.

ಕೊರಿಯಾದ ಜಿನ್ ಯಾಂಗ್ ಕೊ ಚಾಂಪಿಯನ್

ಕೊರಿಯಾದ ಜಿನ್ ಯಾಂಗ್ ಕೊ ಅವರು ಇಲ್ಲಿ ಚಾಂಪಿಯನ್ ಆದರು. ನಾಲ್ಕು ಸುತ್ತುಗಳ ಬಳಿಕ ಕೊ ಮತ್ತು ಕಳೆದ ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾದ ಮಿನ್ಜೀ ಲೀ ಅವರು ತಲಾ 275 ಸ್ಕೋರ್ಗಳೊಂದಿಗೆ ಸಮಬಲ ಸಾಧಿಸಿದ್ದರು. ‘ಪ್ಲೇ ಆಫ್’ನಲ್ಲಿ ಕೊ ಅವರು ಲೀ ವಿರುದ್ಧ ಗೆದ್ದು, ಐದು ವರ್ಷಗಳಲ್ಲಿ ಮೂರನೇ ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿದರು.

ದಕ್ಷಿಣ ಆಫ್ರಿಕಾದ ಆ್ಯಶ್ಲೆ ಬುಹಾಯ್ (278) ಮತ್ತು ಕೊರಿಯಾದ ರ್ಯು ಹಾಯೆ ರಾನ್ (279) ಅವರು ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡರು.

ಥಾಯ್ಲೆಂಡ್ನ ಅತ್ತಾಯ ತಿಟಿಕಲ್ ಮತ್ತು ಕೊರಿಯಾದ ಏಂಜೆಲ್ ಯಿನ್ (ತಲಾ 281) ಅವರು ಅದಿತಿ ಜತೆ ಐದನೇ ಸ್ಥಾನ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.