ಬೆಲ್ಗ್ರೇಡ್: ಭಾರತದ ಯುವ ಕುಸ್ತಿಪಟು ಅಂತಿಮ್ ಪಂಘಲ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದರು.

ಈ ಹಾದಿಯಲ್ಲಿ ಅವರು ಹಾಲಿ ಚಾಂಪಿಯನ್ ಒಲಿವಿಯಾ ಡಾಮಿನಿಕ್ ಪ್ಯಾರಿಶ್ ಅವರಿಗೆ ಆಘಾತ ನೀಡಿದರು. ಮಾತ್ರವಲ್ಲದೆ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟರು.

20 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಪಂಘಲ್ ಅವರು ಬುಧವಾರ ನಡೆದ ಮಹಿಳೆಯರ 53 ಕೆ.ಜಿ ವಿಭಾಗದ ಮೊದಲ ಸುತ್ತಿನಲ್ಲಿ ಅಮೆರಿಕದ ಕುಸ್ತಿಪಟು ವಿರುದ್ಧ 0–2 ಹಿನ್ನಡೆಗೆ ಜಾರಿದರೂ, ಬಳಿಕ ಪುಟಿದೆದ್ದು 3–2ರಿಂದ ಹಿಮ್ಮೆಟ್ಟಿಸಿದರು.

ಭಾರತದ 19 ವರ್ಷದ ಆಟಗಾರ್ತಿ, ಹಾಲಿ ಚಾಂಪಿಯನ್ ವಿರುದ್ಧ ರಕ್ಷಣಾತ್ಮಕ ಆಟ ಪ್ರದರ್ಶಿಸಿದರು. ಎದುರಾಳಿಯ ಪ್ರಯತ್ನವನ್ನು ಸತತವಾಗಿ ವಿಫಲಗೊಳಿಸಿದ ಅವರು, ಮೊದಲ ಅವಧಿಯ ಅಂತ್ಯದವರೆಗೆ ಯಾವುದೇ ಅಂಕಗಳನ್ನು ಬಿಟ್ಟುಕೊಡಲಿಲ್ಲ. ನಂತರದ ಹೋರಾಟದಲ್ಲಿ ತುಸು ಹಿನ್ನಡೆ ಅನುಭವಿಸಿದರೂ ಅಂತಿಮವಾಗಿ ಮೇಲುಗೈ ಸಾಧಿಸಿದರು.

ಮುಂದಿನ ಸುತ್ತಿನಲ್ಲಿ ಪಂಘಲ್ ಅವರು ಪೋಲೆಂಡ್ನ ರೊಕ್ಸಾನಾ ಮಾರ್ಟಾ ಝಸೀನಾ ಅವರನ್ನು ತಾಂತ್ರಿಕ ಕೌಶಲ ಶ್ರೇಷ್ಠತೆಯ ಆಧಾರದಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಕೇವಲ ಒಂದು ನಿಮಿಷ ಮತ್ತು 38 ಸೆಕೆಂಡ್ನಲ್ಲಿ ಎದುರಾಳಿಯನ್ನು ಮಣಿಸಿದರು.

ಕ್ವಾರ್ಟರ್ ಫೈನಲ್ನಲ್ಲಿ ಅವರು, ತಟಸ್ಥ ಕ್ರೀಡಾಪಟುವಾಗಿ ಸ್ಪರ್ಧಿಸುತ್ತಿರುವ ರಷ್ಯಾದ ನಟಾಲಿಯಾ ಮಾಲಿಶೇವಾ ವಿರುದ್ಧ 9-6 ಗೆಲುವು ಸಾಧಿಸಿದರು. ಪಂದ್ಯದ ಆರಂಭದಲ್ಲೇ ಹಿಡಿತ ಸಾಧಿಸಿದ ಪಂಘಲ್ 6–0 ಮುನ್ನಡೆ ಪಡೆದರು. ಈ ವೇಳೆ ಪುಟಿದೆದ್ದ ನಟಾಲಿಯಾ 6–6ರ ಸಮಬಲ ಸಾಧಿಸಿದರು. ನಂತರದ ಪ್ರತಿದಾಳಿಯಲ್ಲಿ ಪಂಘಲ್ ಮುನ್ನಡೆ ಗಳಿಸಿ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದರು.

ಮತ್ತೊಂದೆಡೆ ಮನೀಷಾ (62ಕೆಜಿ), ಪ್ರಿಯಾಂಕಾ (68 ಕೆಜಿ) ಮತ್ತು ಜ್ಯೋತಿ ಬ್ರೂವಾಲ್ (72 ಕೆಜಿ) ಪರಾಭವಗೊಂಡರು.

ಭಾರತದ ಐವರು ಮಹಿಳಾ ಕುಸ್ತಿಪಟುಗಳು ಮತ್ತು 10 ಪುರುಷ ಫ್ರೀ ಸ್ಟೈಲ್ ಕುಸ್ತಿಪಟುಗಳು ಈಗಾಗಲೇ ಟೂರ್ನಿಯಿಂದ ಒಲಿಂಪಿಕ್ ಕೋಟಾ ಅಥವಾ ಒಲಂಪಿಕ್ ಅಲ್ಲದ ವಿಭಾಗಗಳಲ್ಲಿ ಪದಕವಿಲ್ಲದೆ ಹೊರನಡೆದಿದ್ದಾರೆ.

ಭಾರತ ಕುಸ್ತಿ ಫೆಡರೇಷನ್ ಅಮಾನತುಗೊಂಡಿರುವುದರಿಂದ ಭಾರತದ ಕುಸ್ತಿಪಟುಗಳು ಯುಡಬ್ಲ್ಯುಡಬ್ಲ್ಯು (ಯುನೈಟೆಡ್ ವರ್ಲ್ಡ್ ರೆಸ್ಲಿಂಗ್) ಧ್ವಜದ ಅಡಿಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.