ಬುಡಾಪೆಸ್ಟ್: ಕರ್ನಾಟಕದ ಅರ್ಚನಾ ಕಾಮತ್ ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಟೂರ್ನಿಯ ಮಹಿಳೆಯ ವಿಭಾಗದಲ್ಲಿ ಅಮೋಘ ಜಯಗಳಿಸಿ ಪ್ರೀಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.

ಒಲಿಂಪಿಯನ್ ಮಣಿಕಾ ಬಾತ್ರಾ ಮತ್ತು ಶ್ರೀಜಾ ಅಕುಲ್ ಅವರು ಕೂಡ ತಮ್ಮ ಸುತ್ತಿನಲ್ಲಿ ಪ್ರಯಾಸದ ಜಯ ಸಾಧಿಸಿ 16ರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.

ವಿಶ್ವ ಶ್ರೇಯಾಂಕದಲ್ಲಿ 134ನೇ ಸ್ಥಾನದಲ್ಲಿರುವ ಅರ್ಚನಾ11-8, 11-9, 6-11, 5-11, 11-9ರಿಂದ 58ನೇ ರ‍್ಯಾಂಕ್‌ನ ರಷ್ಯಾದ ಯಾನಾ ನೊಸ್ಕೊವಾ ವಿರುದ್ಧ ಗೆದ್ದರು.

32ರ ಘಟ್ಟದಲ್ಲಿ 60ನೇ ರ‍್ಯಾಂಕ್‌ನ ಮಣಿಕಾ 7-11, 11-7, 11-6, 13-15, 11-5ರಿಂದ ಜರ್ಮನಿಯ ಸಬೀನಾ ವಿಂಟರ್ ವಿರುದ್ಧ ಗೆದ್ದರು.

ಇನ್ನೊಂದು ಪಂದ್ಯದಲ್ಲಿ; ಶ್ರೀಜಾ ಅಕುಲ್ 11-8, 6-11, 14-12, 2-11, 11-7ರಿಂದ ಸ್ವೀಡನ್ ದೇಶದ ಲಿಂಡಾ ಬರ್ಗ್‌ಸ್ಟಾರ್ಮ್ ವಿರುದ್ಧ ಗೆದ್ದರು.

ಆದರೆ ಭಾರತದ ರೀತ್ ಟೆನ್ನಿಸನ್ ಹಂಗರಿಯ ಸಾಂಡ್ರಾ ಪರ್ಗೆಲ್ ವಿರುದ್ಧ ಸೋತರು.

ಈ ಟೂರ್ನಿಯ ಪುರುಷರ ವಿಭಾಗದಲ್ಲಿ ಜಿ. ಸತ್ಯನ್, ಹರ್ಮೀತ್ ದೇಸಾಯಿ ಮತ್ತು ಮಾನವ್ ಠಕ್ಕರ್ ಸ್ಪರ್ಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.