ಡೆನ್ ಬಾಷ್, ನೆದರ್‌ಲೆಂಡ್ಸ್: ಭಾರತ ಪುರುಷರ ಆರ್ಚರಿ ತಂಡವು 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದೆ.

ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ 5–0ಯಿಂದ ಕೆನಡಾ ವಿರುದ್ಧ ಗೆದ್ದಿತು. ಆ ಮೂಲಕ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟ ಭಾರತ ತಂಡವು ಒಲಿಂಪಿಕ್ಸ್ ರಹದಾರಿ ಪಡೆಯಿತು. ತರುಣದೀಪ್ ರಾಯ್, ಪ್ರವೀಣ್ ಜಾಧವ್ ಮತ್ತು ಅತನು ದಾಸ್ ಅವರಿದ್ದ ತಂಡವು ಈ ಸಾಧನೆ ಮಾಡಿದೆ.

2012ರ ಒಲಿಂಪಿಕ್ಸ್ ನಂತರ ಮತ್ತೊಮ್ಮೆ ಪುರುಷರ ತಂಡವು ಅರ್ಹತೆ ಗಿಟ್ಟಿಸಿದೆ. 2016ರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ತಂಡವು ವಿಫಲವಾಗಿತ್ತು.

‘ಅಂತಿಮವಾಗಿ ನಾವು ಒಲಿಂಪಿಕ್ಸ್ ಪ್ರವೇಶಿಸುವಲ್ಲಿ ಸಫಲರಾಗಿದ್ದೇವೆ. ಈಗ ನಮ್ಮ ಗಮನ 2020ರತ್ತ ನೆಟ್ಟಿದೆ. ಅಲ್ಲಿ ಉನ್ನತ ಸಾಧನೆ ಮಾಡುವುದು ನಮ್ಮ ಗುರಿ’ ಎಂದು ಒಲಿಂಪಿಯನ್ ತರುಣ್ ದೀಪ್ ರಾಯ್ ತಿಳಿಸಿದ್ದಾರೆ.

ಮಹಿಳೆಯರ ರಿಕರ್ವ್ ತಂಡವ ಕೂಡ ಒಲಿಂಪಿಕ್ಸ್ ರಹದಾರಿ ಪಡೆಯುವ ವಿಶ್ವಾಸದಲ್ಲಿದೆ. ಇಲ್ಲಿ ನಡಯುತ್ತಿರುವ ಸ್ಪರ್ಧೆಯಲ್ಲಿ ಮಹಿಳಾ ವಿಭಾಗದಲ್ಲಿ ಅಗ್ರ ಎಂಟು ಸ್ಥಾನಗಳನ್ನು ಗಳಿಸುವ ತಂಡಗಳಿಗೆ ಟೋಕಿಯೊ ಟಿಕೆಟ್ ಲಭಿಸಲಿದೆ.

ಮಿಶ್ರ ತಂಡ ವಿಭಾಗದಲ್ಲಿ ತರುಣ್ ದೀಪ್ ರಾಯ್ ಮತ್ತು ಬೊಂಬಿಯಾಲಾ ದೇವಿ ಸೋತರು. ತಂಡವು 17–19ರಿಂದ ಪೊಲೆಂಡ್ ಎದುರು ಸೋತಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.