ಬೆಂಗಳೂರು: ಅರ್ಜುನ್ ಇರಿಗೇಶಿ ಅವರು ಸೋಮವಾರ ಪ್ರಕಟವಾದ ಫಿಡೆ ರೇಟಿಂಗ್ ಪಟ್ಟಿಯಲ್ಲಿ ವಿಶ್ವನಾಥನ್ ಆನಂದ್ ಅವರನ್ನು ಹಿಂದೆಹಾಕಿ ಭಾರತದ ಅಗ್ರಮಾನ್ಯ ಆಟಗಾರ ಎನಿಸಿದ್ದಾರೆ. ಹೊಸ ಪಟ್ಟಿಯಲ್ಲಿ ಅರ್ಜುನ್ (ರೇಟಿಂಗ್ 2756) ವಿಶ್ವ ಕ್ರಮಾಂಕದಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.

ವಿಶ್ವನಾಥನ್ ಆನಂದ್ (2751) 11ನೇ ಸ್ಥಾನದಲ್ಲಿದ್ದಾರೆ. 21 ವರ್ಷದ ಅರ್ಜುನ್, ಆನಂದ್ ಅವರನ್ನು ಹಿಂದೆಹಾಕಿದ ಭಾರತದ ಎರಡನೇ ಆಟಗಾರ ಎನಿಸಿದರು. 2023ರ ಸೆಪ್ಟೆಂಬರ್‌ನಲ್ಲಿ ಡಿ.ಗುಕೇಶ್ ಅವರು ಮೊದಲ ಬಾರಿ ಆ ಸಾಧನೆಗೆ ಪಾತ್ರರಾಗಿದ್ದರು. ಆನಂದ್ ದೀರ್ಘಕಾಲದಿಂದ ಭಾರತದ ಅಗ್ರಮಾನ್ಯ ಆಟಗಾರರಾಗಿದ್ದಾರೆ.

ನೂತನ ಪಟ್ಟಿಯಲ್ಲಿ ಪ್ರಜ್ಞಾನಂದ 14ನೇ ಸ್ಥಾನ, ಗುಕೇಶ್ 16ನೇ ಸ್ಥಾನ ಹಾಗೂ ವಿದಿತ್ ಗುಜರಾತಿ 25ನೇ ಸ್ಥಾನದಲ್ಲಿದ್ದಾರೆ.

ಆನಂದ್, ಪಿ.ಹರಿಕೃಷ್ಣ, ಡಿ.ಗುಕೇಶ್ ಅವರ ನಂತರ ವಿಶ್ವದ ಅಗ್ರ ಹತ್ತರಲ್ಲಿ ಸ್ಥಾನ ಪಡೆದ ಭಾರತದ ನಾಲ್ಕನೇ ಆಟಗಾರ ಎಂಬ ಶ್ರೇಯ ಅವರದಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.