ಜಕಾರ್ತ : ಹಾಲಿ ಚಾಂಪಿಯನ್ ಭಾರತ ಪುರುಷರ ಹಾಕಿ ತಂಡ ಏಷ್ಯನ್ ಕ್ರೀಡಾಕೂಟದಲ್ಲಿ ಮತ್ತೊಮ್ಮೆ ಗೋಲಿನ ಮಳೆ ಸುರಿಸಿದೆ.

ಮಂಗಳವಾರ ನಡೆದ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಪಿ.ಆರ್.ಶ್ರೀಜೇಶ್ ಬಳಗ 20–0 ಗೋಲುಗಳಿಂದ ಶ್ರೀಲಂಕಾವನ್ನು ಹಣಿದು ಅಜೇಯವಾಗಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ.

ನಾಲ್ಕರ ಘಟ್ಟದ ಹೋರಾಟದಲ್ಲಿ ಶ್ರೀಜೇಶ್ ಪಡೆ ಮಲೇಷ್ಯಾ ಎದುರು ಸೆಣಸಲಿದೆ. ಈ ಬಾರಿಯ ಕೂಟದಲ್ಲಿ ಭಾರತ ಒಟ್ಟು 76 ಗೋಲುಗಳನ್ನು ಬಾರಿಸಿ ದಾಖಲೆ ಬರೆದಿದೆ.

ಲಂಕಾ ಎದುರಿನ ಹಣಾಹಣಿಯಲ್ಲಿ ಆಕಾಶ್ದೀಪ್ ಸಿಂಗ್ (9, 11, 17, 22, 32 ಮತ್ತು 42ನೇ ನಿಮಿಷ) ಆರು ಗೋಲು ಬಾರಿಸಿ ಗಮನ ಸೆಳೆದರು. ರೂಪಿಂದರ್ ಪಾಲ್ ಸಿಂಗ್ (1, 52 ಮತ್ತು 53ನೇ ನಿ.), 200ನೇ ಅಂತರರಾಷ್ಟ್ರೀಯ ಪಂದ್ಯ ಆಡಿದ ಹರ್ಮನ್ಪ್ರೀತ್ ಸಿಂಗ್ (5, 21 ಮತ್ತು 33ನೇ ನಿ.) ಮತ್ತು ಮನದೀಪ್ ಸಿಂಗ್ (35, 43 ಮತ್ತು 59ನೇ ನಿ.) ಹ್ಯಾಟ್ರಿಕ್ ಸಾಧನೆ ಮಾಡಿದರು.

ಲಲಿತ್ ಉಪಾಧ್ಯಾಯ (57 ಮತ್ತು 58ನೇ ನಿ.), ವಿವೇಕ್ ಸಾಗರ್ ಪ್ರಸಾದ್ (31), ಅಮಿತ್ ರೋಹಿದಾಸ್ (38) ಮತ್ತು ದಿಲ್ಪ್ರೀತ್ ಸಿಂಗ್ (53ನೇ ನಿ.) ಅವರೂ ಕೈಚಳಕ ತೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.