ನವದೆಹಲಿ: ಭಾರತದ ಸೈಕ್ಲಿಸ್ಟ್ಗಳು, ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಷಿಪ್ಸ್ನಲ್ಲಿ ಉತ್ತಮ ಆರಂಭ ಮಾಡಿದರು. ಬುಧವಾರ ಮಹಿಳೆಯರ ಜೂನಿಯರ್ ತಂಡ ಸ್ಪ್ರಿಂಟ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿತು. ಇದರ ಜೊತೆಗೆ ಭಾರತ ತಂಡ ಎರಡು ಬೆಳ್ಳಿ, ಒಂದು ಕಂಚಿನ ಪದಕವನ್ನೂ ತನ್ನದಾಗಿಸಿಕೊಂಡಿತು.

ಸರಿತಾ ಕುಮಾರಿ, ನಿಯಾ ಸೆಬಾಸ್ಟಿಯನ್ ಮತ್ತು ಜೈನಾ ಮೊಹಮ್ಮದ್ ಅಲಿ ಪಿರ್ಖಾನ್ ಅವರನ್ನು ಒಳಗೊಂಡ ಭಾರತ ತಂಡ ಕೌಶಲ ಮತ್ತು ಸಾಂಘಿಕ ಪ್ರದರ್ಶನ ನೀಡಿ 54.383 ಸೆ.ಗಳಲ್ಲಿ ಗುರಿತಲುಪಿ, ಕೊರಿಯಾ ತಂಡವನ್ನು ಎರಡನೇ ಸ್ಥಾನಕ್ಕೆ ಸರಿಸಿತು.

‘ಏಷ್ಯಾದ ಬಲಾಢ್ಯ ತಂಡವನ್ನು ಸೋಲಿಸಿರುವುದು ನಮಗೆ ಕನಸಿನಂತೆ ಕಾಣುತ್ತಿದೆ. ತಂಡದ ಎಲ್ಲರ ಶ್ರಮದಿಂದ ಇದು ಸಾಧ್ಯವಾಗಿದೆ’ ಎಂದು ಸ್ಪರ್ಧೆಯ ನಂತರ ನಿಯಾ ಪ್ರತಿಕ್ರಿಯಿಸಿದರು.

ಪ್ಯಾರಾ ಟೀಮ್ ಸ್ಪ್ರಿಂಟ್ ವಿಭಾಗದಲ್ಲಿ ಭಾರತ ತಂಡ (ಅರ್ಷದ್ ಶೇಕ್, ಜಲಾಲುದ್ದೀನ್ ಅನ್ಸಾರಿ ಮತ್ತು ಬಸವರಾಜ ಹೊರಡ್ಡಿ) 1ನಿ.02.661 ಸೆ.ಗಳ ಅವಧಿಯೊಡನೆ ರಜತ ಪದಕ ಪಡೆಯಿತು. ಮಲೇಷ್ಯಾ (52.284 ಸೆ.) ಚಿನ್ನ ಗೆದ್ದರೆ, ಸೌದಿ ಅರೇಬಿಯಾ ಕಂಚಿನ ಪದಕ ಗಳಿಸಿತು.

ಜೂನಿಯರ್ ಟೀಮ್ ಸ್ಪ್ರಿಂಟ್ ರೇಸ್ನಲ್ಲಿ ಭಾರತ ಇನ್ನೊಂದು ಬೆಳ್ಳಿ ಪಡೆಯಿತು. ನಾರಾಯಣ ಮಹತೊ, ಸೈಯ್ಯದ್ ಖಾಲಿದ್ ಬಾಘಿ ಮತ್ತು ಮಯಂಗ್ಲಂಬಾಂ ವಟ್ಟಬಾ ಮೀಥಿ ಅವರಿದ್ದ ತಂಡ 47.93 ಸೆ. ತೆಗೆದುಕೊಂಡಿತು. ಕೊರಿಯಾದ ಸ್ಪರ್ಧಿಗಳನ್ನು ಹಿಂದೆಹಾಕಿದರು.

ಮಹಿಳಾ ಜೂನಿಯರ್ ತಂಡ (ಹರ್ಷಿತಾ ಜಾಖಡ್, ಸುಹಾಣಿ ಕುಮಾರಿ, ಧನ್ಯದಾ ಜೆ.ಪಿ. ಮತ್ತು ಭೂಮಿಕಾ) ತೀವ್ರ ಹೋರಾಟ ಕಂಡ ಟೀಮ್ ಪರ್ಸ್ಯೂಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆಯಿತು. ದಕ್ಷಿಣ ಕೊರಿಯಾ ಚಿನ್ನ ಗೆದ್ದರೆ, ಕಜಕಸ್ತಾನ ಬೆಳ್ಳಿಯ ಪದಕ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.