ನಿಂಗ್ಬೊ, ಚೀನಾ: ಭಾರತದ ಅಜಯ್ ಸಿಂಗ್, ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಅಪೂರ್ವ ಸಾಮರ್ಥ್ಯ ತೋರಿದ್ದಾರೆ.

ಸೋಮವಾರ ನಡೆದ ಪುರುಷರ 81 ಕೆ.ಜಿ.ವಿಭಾಗದ ಸ್ಪರ್ಧೆಯಲ್ಲಿ ಅಜಯ್, ಸ್ನ್ಯಾಚ್‌ನಲ್ಲಿ 142 ಕೆ.ಜಿ ಹಾಗೂ ಕ್ಲೀನ್ ಮತ್ತು ಜೆರ್ಕ್‌ನಲ್ಲಿ 178 ಕೆ.ಜಿ. (ಒಟ್ಟಾರೆ 320 ಕೆ.ಜಿ) ಭಾರ ಎತ್ತಿ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದರು.

ಅಜಯ್ ಅವರು ಏಷ್ಯನ್ ಯೂತ್ ಮತ್ತು ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದರು.

ಪುರುಷರ 77 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿರುವ ಅಚಿಂತ ಶೆವುಲಿ ಮೂರನೇ ಸ್ಥಾನ ಪಡೆದರು. ಅವರು ಸ್ನ್ಯಾಚ್‌ನಲ್ಲಿ 137 ಕೆ.ಜಿ ಹಾಗೂ ಕ್ಲೀನ್ ಮತ್ತು ಜೆರ್ಕ್‌ನಲ್ಲಿ 160 ಕೆ.ಜಿ. (ಒಟ್ಟಾರೆ 297 ಕೆ.ಜಿ) ಸಾಮರ್ಥ್ಯ ತೋರಿದರು. ಈ ಮೂಲಕ ‘ಬಿ’ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದರು.

ಇಂಡೊನೇಷ್ಯಾದ ರಹಮತ್ ಇರ್ವಿನ್ ಅಬ್ದುಲ್ಲಾ (312 ಕೆ.ಜಿ) ಮತ್ತು ಫಾಮ್ ತುವನ್ ಅನ್ಹ್ (304 ಕೆ.ಜಿ) ಮೊದಲ ಎರಡು ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.