ಬಿಷ್ಕೆಕ್ (ಕಿರ್ಗಿಸ್ತಾನ): ಭಾರತದ ಕುಸ್ತಿಪಟುಗಳಾದ ಅಂಜು ಮತ್ತು ಹರ್ಷಿತಾ ಇಲ್ಲಿ ನಡೆಯುತ್ತಿರುವ ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿಪದಕ ಗೆದ್ದರು.

ರೈಲ್ವೇಸ್ನ ಕುಸ್ತಿಪಟು ಅಂಜು ಭಾನುವಾರ ನಡೆದ 53 ಕೆ.ಜಿ ವಿಭಾಗದ ಫೈನಲ್ನಲ್ಲಿ ಅವರು ಉತ್ತರ ಕೊರಿಯಾದ ಜಿ ಹಯಾಂಗ್ ಕಿಮ್ ಅವರಿಗೆ ಮಣಿದರು. ಒಂದೇ ಒಂದು ಅಂಕ ಗಳಿಸಲು ಅಂಜು ಅವರಿಗೆ ಸಾಧ್ಯವಾಗದೆ, ತಾಂತ್ರಿಕ ಕೌಶಲದ ಆಧಾರದಲ್ಲಿ ಚಿನ್ನವನ್ನು ಕಳೆದುಕೊಂಡರು.

ಸೆಮಿಫೈನಲ್ನಲ್ಲಿ 9-6 ರಿಂದ ಚೀನಾದ ಚುನ್ ಲೀ ಅವರನ್ನು ಹಿಮ್ಮೆಟ್ಟಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದ್ದರು.

72 ಕೆಜಿ ವಿಭಾಗದ ಫೈನಲ್ನಲ್ಲಿ ಹರ್ಷಿತಾ ಅವರು 2–5ರಿಂದ ಚೀನಾದ ಕಿಯಾನ್ ಜಿಯಾಂಗ್ ವಿರುದ್ಧ ಪರಾಭವಗೊಂಡರು. ಅವರು ಸೆಮಿಫೈನಲ್ನಲ್ಲಿ ಉಜ್ಬೇಕಿಸ್ತಾನದ ಓಜೋಡಾ ಜರಿಪ್ಬೋವಾ ಅವರನ್ನು ಸೋಲಿಸಿದ್ದರು.

ಮನೀಶಾ ಭನ್ವಾಲಾ (62 ಕೆಜಿ) ಮತ್ತು ಅಂತಿಮ್ ಕುಂದು (65 ಕೆಜಿ) ಕಂಚಿನ ಪದಕ ಗೆದ್ದರು.

ಒಟ್ಟಾರೆಯಾಗಿ ಭಾರತದ ಮಹಿಳಾ ಕುಸ್ತಿಪಟುಗಳು ಮೂರು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಗೆದ್ದರು.ಈ ಮೊದಲು ರಾಧಿಕಾ 68 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದರೆ, ಶಿವಾನಿ ಪವಾರ್ ಶನಿವಾರ ಕಂಚಿನ ಪದಕ ಜಯಿಸಿದ್ದರು.

ಪುರುಷರ ಫ್ರೀಸ್ಟೈಲ್ ಕುಸ್ತಿಯಲ್ಲಿ ಉದಿತ್ (57 ಕೆಜಿ) ಬೆಳ್ಳಿ ಗೆದ್ದರೆ, ಅಭಿಮನ್ಯು (70 ಕೆಜಿ) ಮತ್ತು ವಿಕ್ಕಿ (97 ಕೆಜಿ) ತಮ್ಮ ವಿಭಾಗಗಳಲ್ಲಿ ಕಂಚಿನ ಪದಕ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.