ಬೆಂಗಳೂರು: ಮೊದಲೇ ನಿರೀಕ್ಷಿಸಿದಂತೆ ‘ದಿ ಇನ್ವೇಡರ್’ ಶನಿವಾರ ನಡೆದ ‘ಕ್ಯಾಟಲಿಸ್ಟ್ ಪ್ರಾಪರ್ಟೀಸ್ ಬೆಂಗಳೂರು ಡರ್ಬಿ’ಯಲ್ಲಿ ಭರ್ಜರಿ ಗೆಲುವು ಸಾಧಿಸಿತು.

ಬೆಟ್ಟಿಂಗ್‌ನಲ್ಲಿ ಮೊದಲನೇ ಫೇವರಿಟ್ ಆಗಿದ್ದ ‘ಈಸ್ ನಾಟ್ ಶೀ ಲವ್ಲಿ’ ಕುದುರೆಗೆ 4/1ಕ್ಕಿಂತಲೂ ಹೆಚ್ಚಿನ ಬೆಲೆ ನೀಡಲಾಗಿತ್ತು. ‘ದಿ ಇನ್ವೇಡರ್’ ಗೆ ಸುಮಾರು 9/2, ‘ಮಿಸ್ಟರ್ ಹ್ಯಾಂಡ್ಸಮ್’ ಮತ್ತು ‘ಮಲ್ಟಿಫೆಸೆಟೆಡ್’ಗೆ ಸುಮಾರು 5/1ಕ್ಕಿಂತಲೂ ಹೆಚ್ಚಿನ ಬೆಲೆಯನ್ನು ನೀಡಲಾಗಿತ್ತು.

ರೇಸ್ ಅರಂಭಗೊಂಡಾಗ ಕಣಕ್ಕಿಳಿದ 13 ಕುದುರೆಗಳಲ್ಲಿ ‘ಪ್ಲೇ ಸೇಫ್’ ಮುನ್ನುಗ್ಗಿ ಕೊನೆಯ ತಿರುವಿನವರೆಗೂ ಲೀಡ್‌ನಲ್ಲಿ ಓಡಿತು. ‘ಈಸ್ ನಾಟ್ ಶೀ ಲವ್ಲಿ’ ಒಂಬತ್ತನೇ ಅಥವಾ ಹತ್ತನೇ ಸ್ಥಾನದಲ್ಲಿ. ‘ದಿ ಇನ್ವೆಡರ್’ ಕೊನೆಯ ಸ್ಥಾನದಲ್ಲಿ ‘ಏರ್ ಕಮಾಂಡ್’ ನೊಂದಿಗೆ ಓಡುತ್ತಿತ್ತು. ಕೊನೆಯ 300 ಮೀಟರ್ಸ್ ಇರುವಂತೆ, ‘ಈಸ್ ನಾಟ್ ಶೀ ಲವ್ಲಿ’ ರಭಸದಿಂದ ಮುನ್ನುಗ್ಗಿ ಲೀಡ್ ಪಡೆಯಿತು. ಅದೇ ಸಮಯದಲ್ಲಿ, ‘ದಿ ಇನ್ವೇಡರ್’ ಬೆರಗುಗೊಳಿಸುವ ಓಟದಿಂದ ಬಂದು ಕೊನೆಯ 200 ಮೀಟರ್ಸ್ ಇರುವಂತೆಯೇ ಎಲ್ಲಾ ಎದುರಾಳಿಗಳನ್ನು ಹಿಂದಿಕ್ ಗೆದ್ದಿತು. ‘ಈಸ್ ನಾಟ್ ಶೀ ಲವ್ಲಿ’ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ‘ನ್ಯೂ ಮೂನ್’ ಮೂರನೆ ಸ್ಥಾನವನ್ನು ‘ಈಗಲ್ ಇನ್ ದಿ ಸ್ಕೈ’ ನೊಂದಿಗೆ ಹೋರಾಟ ನಡೆಸಿ ಅತ್ಯಂತ ನಿಕಟ ಅಂತರದಿಂದ ಗುರಿ ಮುಟ್ಟಿತು. ಈ 2400 ಮೀಟರ್ಸ್ ದೂರದ ಡರ್ಬಿ ಗೆಲ್ಲಲು ‘ದಿ ಇನ್ವೇಡರ್’ ಎರಡು ನಿಮಿಷ 33.86 ಸೆಕೆಂಡ್ಸ್ ತೆಗೆದುಕೊಂಡಿದೆ.

ಕ್ಯಾಟಲಿಸ್ಟ್ ಪ್ರಾಪರ್ಟೀಸ್ ಮತ್ತು ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್ ಜಂಟಿಯಾಗಿ ಪ್ರಾಯೋಜಿಸಿದ್ದ ಈ ಡರ್ಬಿಯ ಒಟ್ಟು ಮೊತ್ತ ಸುಮಾರು ₹ 1.52 ಕೋಟಿಗಳು.

ವಿಜೇತ ಅಶ್ವ ‘ದಿ ಇನ್ವೇಡರ್’ ನ ಜಂಟಿ ಮಾಲೀಕರಾದ ಎ.ಮುನಿರಾಜು ಮತ್ತು ಎನ್ ನಂದಕುಮಾರ್ ಅವರು ₹74.79 ಲಕ್ಷ ಮತ್ತು ಸುಮಾರು ₹ 1.25 ಲಕ್ಷ ಮೌಲ್ಯದ ಸುಂದರ ಟ್ರೋಫಿಯನ್ನು ಗಳಿಸಿದರು. ಜಿ. ನಿತ್ಯಾನಂದ ಅವರು ತರಬೇತಿ ನೀಡಿರುವ ಇನ್ವೇಡರ್ ಅಶ್ವಕ್ಕೆ ಟ್ರೆವರ್ ಪಟೇಲ್ ಜಾಕಿಯಾಗಿದ್ದರು. ಈಚೆಗೆ ನಡೆದಿದ್ದ ಮಂಜರಿ ಸ್ಟಡ್ 2000 ಗಿನ್ನಿಸ್ ನಲ್ಲಿಯೂ ಇನ್ವೇಡರ್ ಗೆದ್ದಿತು. ಈ ಡರ್ಬಿ ಗೆಲುವಿನೊಂದಿಗೆ ಕ್ಲಾಸಿಕ್ ಡಬಲ್ ಸಂಪಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.