ಶಾಂಘೈ : ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೆಂಟೊ ಮೊಮೊಟಾ ಅವರು ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಭಾನುವಾರ ನಡೆದ ಫೈನಲ್ನಲ್ಲಿ ಜಪಾನ್ನ ಮೊಮೊಟಾ 17–21, 21–17, 21–14ರಲ್ಲಿ ಇಂಡೊನೇಷ್ಯಾದ ಅಂಥೋಣಿ ಸಿನಿಸುಕಾ ಜಿಂಟಿಂಗ್ ಅವರನ್ನು ಮಣಿಸಿದರು. ಇದರೊಂದಿಗೆ ಈ ಋತುವಿನಲ್ಲಿ 11ನೇ ಪ್ರಶಸ್ತಿ ಗೆದ್ದು ಮಲೇಷ್ಯಾದ ಲೀ ಚೊಂಗ್ ವೀ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದರು.

ಲೀ ಚೊಂಗ್ ಅವರು 2010ರ ಋತುವಿನಲ್ಲಿ ಒಟ್ಟು 10 ಪ್ರಶಸ್ತಿಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದರು.

ಮೊಮೊಟಾ ಮತ್ತು ಜಿಂಟಿಂಗ್ ನಡುವಣ 1 ಗಂಟೆ 27 ನಿಮಿಷಗಳ ಫೈನಲ್ ಹಣಾಹಣಿ ಜಿದ್ದಾಜಿದ್ದಿನಿಂದ ಕೂಡಿತ್ತು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ಜಿಂಟಿಂಗ್ ಮೊದಲ ಗೇಮ್ನಲ್ಲಿ ದಿಟ್ಟ ಆಟ ಆಡಿ ಎದುರಾಳಿಯನ್ನು ಮಣಿಸಿದರು.

ಎರಡನೇ ಗೇಮ್ನಲ್ಲಿ ತಿರುಗೇಟು ನೀಡಿದ ಮೊಮೊಟಾ 1–1 ಸಮಬಲ ಸಾಧಿಸಿದರು.

ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್ನಲ್ಲಿ ಮೊಮೊಟಾ ಮತ್ತೊಮ್ಮೆ ಮಿಂಚಿದರು. 12–5ರಿಂದ ಮುನ್ನಡೆ ಗಳಿಸಿದ ಅವರು ನಂತರವೂ ಪರಿಣಾಮಕಾರಿಯಾಗಿ ಆಡಿ ಗೆಲುವಿನ ತೋರಣ ಕಟ್ಟಿದರು.

ಮಹಿಳಾ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಚೀನಾದ ಚೆನ್ ಯೂಫಿ ಅವರ ಪಾಲಾಯಿತು.

ಫೈನಲ್ನಲ್ಲಿ ಯೂಫಿ 12–21, 21–12, 21–17ರಲ್ಲಿ ತೈವಾನ್ನ ತೈ ಜು ಯಿಂಗ್ ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.