ಕ್ಯಾಲ್ಗರಿ, ಕೆನಡಾ: ಭಾರತದ ತ್ರಿವಳಿಗಳಾದ ಅಜಯ್ ಜಯರಾಂ, ಸೌರಭ್ ವರ್ಮಾ ಹಾಗೂ ಲಕ್ಷ್ಯ ಸೇನ್ ಅವರು ಕೆನಡಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಮೊದಲ ಸುತ್ತಿನ ಪಂದ್ಯಗಳಲ್ಲಿ ನಿರೀಕ್ಷಿತ ಜಯ ದಾಖಲಿಸಿದ ಅವರು ಎರಡನೇ ಸುತ್ತಿಗೆ ಲಗ್ಗೆಯಿಟ್ಟರು.

ತವರಿನ ಆಟಗಾರ ಹುವಾಂಗ್ ಗುವಾಕ್ಸಿಂಗ್ ವಿರುದ್ಧದ ಪಂದ್ಯದಲ್ಲಿ ಅಲ್ಪ ಹಿನ್ನಡೆ ಎದುರಿಸಿದರೂ 21–15, 20–22, 21–15ರಿಂದ ಅಜಯ್ ಜಯರಾಂ ಗೆಲುವಿನ ನಗೆ ಬೀರಿದರು. ಮುಂದಿನ ಪಂದ್ಯದಲ್ಲಿಅವರು ಇಂಗ್ಲೆಂಡ್ನ ರಾಜೀವ್ ಔಸೆಪ್ ಅವರ ಸವಾಲು ಎದುರಿಸುವರು.

ರಾಷ್ಟ್ರೀಯ ಚಾಂಪಿಯನ್ ಸೌರಭ್ ವರ್ಮಾ ಮತ್ತು ಏಷ್ಯನ್ ಜೂನಿಯರ್ ಚಾಂಪಿಯನ್ ಲಕ್ಷ್ಯ ಸೇನ್ ಅವರು ತಮ್ಮ ಎದುರಾಳಿಗಳ ವಿರುದ್ಧ ಹೆಚ್ಚು ಬೆವರು ಹರಿಸಬೇಕಾಗಲಿಲ್ಲ. ಸುಲಭದ ಜಯ ಸಂಪಾದಿಸಿ ಮುನ್ನಡೆದರು. ಸೌರಭ್ ಅವರು ಕೆನಡಾದ ಅಂಟೋನಿಯೊ ಲೀ ಅವರನ್ನು 21–18, 21–13 ಗೇಮ್ಗಳಿಂದ ಮಣಿಸಿದರೆ, ಲಕ್ಷ್ಯ ಅವರು ಇಂಗ್ಲೆಂಡ್ನ ಚುನ್ ಕಾರ್ ಲುಂಗ್ ವಿರುದ್ಧ 21–7, 21–8ರಿಂದ ಗೆಲುವು ಕಂಡರು. ಪರುಪಳ್ಳಿ ಕಶ್ಯಪ್ ಹಾಗೂ ಎಚ್.ಎಸ್.ಪ್ರಣಯ್ ಅವರು ಮೊದಲ ಸುತ್ತಿನಲ್ಲಿ ಬೈ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.