ಬೆಂಗಳೂರು: ರಾಷ್ಟ್ರೀಯ ಹಾಕಿ ತಂಡದ ಆಟಗಾರರು ಸೇರಿದಂತೆ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಬೆಂಗಳೂರು ಕೇಂದ್ರದ ಒಟ್ಟು 33 ಕ್ರೀಡಾಪಟುಗಳಿಗೆ ಕೋವಿಡ್–19 ಸೋಂಕು ತಗುಲಿದೆ. 128 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಸೋಂಕಿತರ ಪೈಕಿ ಬಹುತೇಕರಲ್ಲಿ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ಕೇಂದ್ರ ತಿಳಿಸಿದೆ.

‘ಹಾಕಿ ತಂಡದ 16 ಆಟಗಾರರು ಮತ್ತು ಒಬ್ಬರು ಕೋಚ್ಗೆ ಸೋಂಕು ತಗುಲಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಎಫ್ಐಎಚ್ ಪ್ರೊ ಲೀಗ್ನಲ್ಲಿ ಪಾಲ್ಗೊಳ್ಳಲಿರುವ ತಂಡ ಇಲ್ಲಿ ಅಭ್ಯಾಸದಲ್ಲಿ ತೊಡಗಿದೆ’ ಎಂದು ತಿಳಿಸಲಾಗಿದೆ.

ಏಪ್ರಿಲ್ನಲ್ಲಿ ನಡೆಯಲಿರುವ ಜೂನಿಯರ್ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಅಟಗಾರ್ತಿಯರ ಪೈಕಿ 15 ಮಂದಿಗೆ ಸೋಂಕು ಆಗಿದ್ದು ಸೀನಿಯರ್ ಮಹಿಳಾ ತಂಡದ ಒಬ್ಬರಿಗೂ ಸೋಂಕಾಗಿದೆ. ಸಾಯ್ ಪಟಿಯಾಲ ಕೇಂದ್ರದಲ್ಲಿ ಬಾಕ್ಸರ್ಗಳು ಸೇರಿದಂತೆ 25 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.