ನವದೆಹಲಿ: ಎರಡು ಬಾರಿಯ ಕಾಮನ್‌ವೆಲ್ತ್ ಚಾಂಪಿಯನ್ ಭಾರತದ ವೇಟ್ ಲಿಫ್ಟರ್ ಸಂಜಿತಾ ಚಾನು ಉದ್ದೀಪನ ಮದ್ದು ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ(ನಾಡಾ) ಶಿಸ್ತು ಸಮಿತಿಯು ಅವರಿಗೆ 4 ವರ್ಷಗಳ ನಿಷೇಧ ಹೇರಿದೆ.

29 ವರ್ಷದ ಚಾನು, ವಿಶ್ವ ಉದ್ದೀಪನ ಮದ್ದು ತಡೆ ಘಟಕದ(ವಾಡಾ)ನಿಷೇಧಿತ ಪಟ್ಟಿಯಲ್ಲಿರುವ ಡ್ರೊಸ್ಟಾನೊಲೊನ್ ಮೆಟಬಾಲೈಟ್ ಸ್ಟಿರಾಯ್ಡ್ ಅನ್ನು ಪಡೆದಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಕಳೆದ ವರ್ಷ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಅಂತ್ಯದಲ್ಲಿ ಸೆಪ್ಟೆಂಬರ್ 30ರಂದು ಪರೀಕ್ಷೆಗಾಗಿ ಅವರ ಮಾದರಿಯನ್ನು ಪಡೆಯಲಾಗಿತ್ತು.

‘ಕ್ರೀಡಾಪಟು ಸಂಜಿತಾ ಚಾನು, ನಾಡಾ ಎಡಿಆರ್ 2021ರ ಆರ್ಟಿಕಲ್ 2.1 ಮತ್ತು 2.2ರ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ದೃಢಪಟ್ಟಿದ್ದು, ನಾಡಾ ಎಡಿಆರ್ 2021ರ ಆರ್ಟಿಕಲ್ 10.2.1ರ ಅಡಿ 4 ವರ್ಷಗಳ ಕಾಲ ನಿಷೇಧ ಹೇರಲಾಗಿದೆ’ ಎಂದು ಮೂರು ಸದಸ್ಯರ ನಾಡಾ ಶಿಸ್ತು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ನವೆಂಬರ್ 12, 2022ರಿಂದಲೇ ಈ ನಿಷೇಧ ಪೂರ್ವಾನ್ವಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.