ಪರ್ತ್: ಎರಡು ಬಾರಿಯ ಒಲಿಂಪಿಕ್ ಸೈಕ್ಲಿಂಗ್ ರಜತ ಪದಕ ವಿಜೇತ ಸೈಕ್ಲಿಂಗ್ ಸ್ಪರ್ಧಿ ಜಾಕ್ ಬಾಬ್ರಿಜ್ ಅವರಿಗೆ ಮಾದಕ ವಸ್ತು ವ್ಯವಹಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯ ಶುಕ್ರವಾರ 4 ವರ್ಷ 6 ತಿಂಗಳ ಅವಧಿಗೆ ಜೈಲು ಶಿಕ್ಷೆ ವಿಧಿಸಿದೆ.

ಬಾಬ್ರಿಜ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಟೀಮ್ ಪರ್ಸ್ಯೂಟ್ ವಿಭಾಗದಲ್ಲಿ ಬೆಳ್ಳಿಯ ಪದಕ ಗೆದ್ದ ಆಸ್ಟ್ರೇಲಿಯಾ ಸೈಕ್ಲಿಂಗ್ ತಂಡದಲ್ಲಿದ್ದರು. 2016 ರಿಯೊ ಒಲಿಂಪಿಕ್ಸ್ ನಂತರ ಅವರು ಕ್ರೀಡೆಗೆ ವಿದಾಯ ಹೇಳಿದ್ದರು.

2017ರ ಮಾರ್ಚ್ ಮತ್ತು ಆಗಸ್ಟ್ ನಡುವೆ ತನ್ನ ಮಾಜಿ ಗೆಳೆಯನಿಗೆ ‘ಎಕ್ಸ್ಟೆಸಿ’ (ಉದ್ದೀಪನ ಮದ್ದಿನ ಗುಳಿಗೆಗಳನ್ನು) ಪೂರೈಸಿದ ಆರೋಪದ ಮೇಲೆ ಪರ್ತ್‌ನ ಜಿಲ್ಲಾ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಆದರೆ ಅವರು ಪೆರೋಲ್‌ಗೆ ಅರ್ಹರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.