ಬೆಂಗಳೂರು: ಮುಂದಿನ ವರ್ಷ ಜನವರಿ 6ರಿಂದ 17ರವರೆಗೆ ಪೆರುವಿನಲ್ಲಿ ನಡೆಯುವ ಡಕಾರ್ ರ‍್ಯಾಲಿಗೆ ಗುರುವಾರ ಶೆರ್ಕೊ ಟಿವಿಎಸ್ ರ‍್ಯಾಲಿ ಫ್ಯಾಕ್ಟರಿ ತಂಡವನ್ನು ಪ್ರಕಟಿಸಲಾಗಿದೆ.

ಫ್ರಾನ್ಸ್‌ನ ಮೈಕಲ್ ಮೆಟ್ಗೆ, ಆಡ್ರಿಯನ್ ಮೆಟ್ಗೆ ಮತ್ತು ಸ್ಪೇನ್‌ನ ಲೊರೆಂಜೊ ಸ್ಯಾಂಟೋಲಿನೊ ಅವರು ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕದ ಕೆ.ಪಿ.ಅರವಿಂದ್ ಪಾನ್ ಆಫ್ರಿಕಾ ರ‍್ಯಾಲಿಯ ವೇಳೆ ಗಾಯಗೊಂಡಿದ್ದರು. ಅವರು ಅಕ್ಟೋಬರ್ 26ರಂದು ಫ್ರಾನ್ಸ್‌ನಲ್ಲಿ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಅದರ ವರದಿ ಬಂದ ನಂತರ ಭಾರತದ ರೈಡರ್‌ನ ಹೆಸರು ಪ್ರಕಟಿಸಲಾಗುತ್ತದೆ.

ಮೈಕಲ್‌ಗೆ ಇದು ಆರನೇ ಡಕಾರ್ ರ‍್ಯಾಲಿ. ಅವರ ಸಹೋದರ ಆಡ್ರಿಯನ್ ನಾಲ್ಕನೇ ಬಾರಿ ಕಣಕ್ಕಿಳಿಯುತ್ತಿದ್ದಾರೆ. ಲೊರೆಂಜೊ ಅವರು ಮೊದಲ ಬಾರಿಗೆ ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ.

5000 ಕಿಲೊ ಮೀಟರ್ಸ್ ದೂರದ ಈ ರ‍್ಯಾಲಿ ಲಿಮಾದಿಂದ ಆರಂಭವಾಗಿ ಪಿಸ್ಕೊ, ಸ್ಯಾನ್ ವುವಾನ್ ಡಿ ಮರಕಾನ ಮತ್ತು ಅರೆಕ್ವಿಪಾ ಮಾರ್ಗವಾಗಿ ಸಾಗಿ ಮೊಕ್ವೆಗುವಾದಲ್ಲಿ ಕೊನೆಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.