ಮಂಗಳೂರು: ಬೆಂಗಳೂರಿನ ಧನುಷ್ ಬಾಬು ಮತ್ತು ಕಲ್ಪನಾ ಕುಟ್ಟಪ್ಪ ಇಲ್ಲಿ ನಡೆಯುತ್ತಿರುವ ರಾಜ್ಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನ ರೋಡ್ ರೇಸ್‌ನಲ್ಲಿ ಶುಕ್ರವಾರ ಮಿಂಚು ಹರಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ದಕ್ಷಿಣ ಕನ್ನಡದ ಮೊಹಮ್ಮದ್ ಶಾಮೀಲ್ ಮತ್ತು ಮೈಸೂರಿನ ಶ್ರೀಜಾ ರಾವ್ ಅವರೂ ಚಿನ್ನಕ್ಕೆ ಮುತ್ತಿಟ್ಟರು.

ರಾಜ್ಯ ರೋಲರ್ ಸ್ಕೇಟಿಂಗ್ ಸಂಸ್ಥೆ ಮತ್ತು ದಕ್ಷಿಣ ಕನ್ನಡ ರೋಲರ್ ಸ್ಪೋರ್ಟ್ಸ್ ಸಂಸ್ಥೆಗಳು ಆಯೋಜಿಸಿರುವ ಚಾಂಪಿಯನ್‌ಷಿಪ್‌ನ ಮೊದಲ ದಿನ ರಿಂಕ್‌ನ ಪುರುಷರ ಡ್ಯುಯಲ್ ಟಿಟಿಯಲ್ಲಿ ಚಿನ್ನ ಗೆದ್ದ ಧನುಷ್ ಶುಕ್ರವಾರ ಇನ್‌ಲೈನ್ ಒಂಟಿ ಲ್ಯಾಪ್ ರೋಡ್ ರೇಸ್‌ನಲ್ಲೂ ಚಿನ್ನದ ಪದಕ ಗಳಿಸಿದರು. ಮಹಿಳೆಯರ ಡ್ಯುಯಲ್ ರೇಸ್‌ನಲ್ಲಿ ಸ್ಥಳೀಯ ಸ್ಕೇಟರ್ ಡ್ಯಾಷಲ್ ಅಮಾಂಡ ಅವರ ಎದುರು ಎರಡನೇ ಸ್ಥಾನಕ್ಕೆ ಕುಸಿದಿದ್ದ ಕಲ್ಪನಾ, ಇನ್‌ಲೈನ್ ಒಂಟಿ ಲ್ಯಾಪ್ ರೋಡ್ ರೇಸ್‌ನಲ್ಲಿ ಚಿನ್ನ ಗೆದ್ದುಕೊಂಡರು. ಡ್ಯಾಷಲ್ ಅಮಾಂಡ ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟುಕೊಂಡರು.

14ರಿಂದ 17 ವರ್ಷದ ಬಾಲಕರ ಡ್ಯುಯಲ್ ಟಿಟಿಯಲ್ಲಿ ಮೊದಲ ದಿನ ಚಿನ್ನ ಗಳಿಸಿದ್ದ ಮೊಹಮ್ಮದ್ ಶಾಮೀಲ್ ಅವರು ರೋಡ್ ರೇಸ್‌ನ ಒಂಟಿ ಲ್ಯಾಪ್‌ನಲ್ಲಿ ಮೊದಲಿಗರಾದರು. 11ರಿಂದ 14 ವರ್ಷದೊಳಗಿನ ಬಾಲಕಿಯರ ಡ್ಯುಯಲ್ ಟಿಟಿಯಲ್ಲಿ ಚಿನ್ನ ಗೆದ್ದಿದ್ದ ಶ್ರೀಜಾ ಅವರಿಗೂ ರೋಡ್ ರೇಸ್‌ನಲ್ಲಿ ಮೊದಲ ಸ್ಥಾನ ಒಲಿಯಿತು.

ಎರಡನೇ ದಿನದ ಫಲಿತಾಂಶಗಳು (ಚಿನ್ನ ಮಾತ್ರ): ಇನ್‌ಲೈನ್ ರೋಡ್ ರೇಸ್, 1 ಲ್ಯಾಪ್, ಪುರುಷರು: ಧನುಷ್ ಬಾಬು (ಬೆಂಗಳೂರು) ಕಾಲ:37.17ಸೆ; ಮಹಿಳೆಯರು: ಕಲ್ಪನಾ ಕುಟ್ಟಪ್ಪ (ಬೆಂಗಳೂರು) ಕಾಲ:41.31ಸೆ; 14ರಿಂದ 17 ವರ್ಷದ ಬಾಲಕರು: ಮುಹಮ್ಮದ್ ಶಮೀಲ್ ಅರ್ಷದ್ (ದಕ್ಷಿಣ ಕನ್ನಡ) ಕಾಲ 39.28 ಸೆ; ಬಾಲಕಿಯರು: ಶಾನನ್ ಪ್ರೇಮ್ (ಬೆಂಗಳೂರು) ಕಾಲ:44.53 ಸೆ; 11ರಿಂದ 14 ವರ್ಷದ ಬಾಲಕರು: ಮಾರುತಿ ನಾಯಕ್ (ಬೆಂಗಳೂರು) ಕಾಲ: 41.95 ಸೆ; ಬಾಲಕಿಯರು: ಶ್ರೀಜಾ ರಾವ್ (ಮೈಸೂರು); 9ರಿಂದ 11 ವರ್ಷದ ಬಾಲಕರು: ಪೂಜಿತ್ ರವಿಕುಮಾರ್ (ಬೆಂಗಳೂರು) ಕಾಲ: 47.95ಸೆ; ಬಾಲಕಿಯರು: ದ್ಯುತಿ ರಮೇಶ್ ಗೌಡ (ಬೆಂಗಳೂರು) ಕಾಲ: 47.54 ಸೆ; 7ರಿಂದ 9 ವರ್ಷದ ಬಾಲಕರು: ಸಮರ್ಥ್ ಆದರ್ಶ್ ಕಾರಂತ (ಬೆಂಗಳೂರು) ಕಾಲ: 51.31 ಸೆ; ಬಾಲಕಿಯರು: ತೃಷಿಣಿ ವಿ (ಬೆಂಗಳೂರು) ಕಾಲ: 52 ಸೆ; ಇನ್‌ಲೈನ್ 3000 ಮೀಟರ್ಸ್ ರೋಡ್ ರೇಸ್: 11ರಿಂದ 14 ವರ್ಷದ ಬಾಲಕರು: ನ್ಯಾಸವಜ್ಜಾಲ ಸಾಯ್ ಋತಿಕ್ (ಬೆಂಗಳೂರು); ಬಾಲಕಿಯರು: ಕುಸುಮಾ ಗೌಡ (ಬೆಂಗಳೂರು); ಕ್ವಾಡ್: 3000 ಮೀಟರ್ಸ್ ರೋಡ್ ರೇಸ್: ಪುರುಷರು: ರೇವತ್ ಜಿ.ವಿ (ಬೆಂಗಳೂರು) ಕಾಲ: 6ನಿ 36.24; ಮಹಿಳೆಯರು: ಡಿಂಪಲ್ ಗೌಡ (ಬೆಂಗಳೂರು); 14ರಿಂದ 17 ವರ್ಷದ ಬಾಲಕರು: ವಿ.ಶ್ರೇಯಸ್ ಗೌಡ (ಬೆಂಗಳೂರು) ಕಾಲ: 6 ನಿ 45.62ಸೆ; ಬಾಲಕಿಯರು: ಪೂರ್ವಿ ಛಡ್ಡಾ (ಬೆಂಗಳೂರು) ಕಾಲ: 6 ನಿ 40.45 ಸೆ; 1500 ಮೀಟರ್ಸ್: 11ರಿಂದ 14 ವರ್ಷದ ಬಾಲಕರು: ಸೌರಭ್ ಸಲೋಖೆ (ಬೆಳಗಾವಿ) ಕಾಲ:2 ನಿ 57.10 ಸೆ; ಬಾಲಕಿಯರು: ಜೆಸ್ನಿಯಾ ಕೋರಿಯ (ದಕ್ಷಿಣ ಕನ್ನಡ) ಕಾಲ: 2 ನಿ 54.36 ಸೆ; ಇನ್‌ಲೈನ್ ರೋಡ್ ಎಲಿಮಿನೇಷನ್: ಪುರುಷರು: ಘನಶ್ಯಾಮ ಪ್ರಭು (ಬೆಂಗಳೂರು) ಕಾಲ: 32 ನಿ 8 ಸೆ; ತೃಪ್ತಿ ಬಿ (ಬೆಂಗಳೂರು); 14ರಿಂದ 17 ವರ್ಷದ ಬಾಲಕರು: ಏಕಾಂಶ್ ಕುಮಾರ್ (ಬೆಂಗಳೂರು) ಕಾಲ: 29 ನಿ 41.03 ಸೆ; ಬಾಲಕಿಯರು: ವರ್ಷಿಣಿ ಅಪರ್ಣಾ (ಬೆಂಗಳೂರು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.