ನವದೆಹಲಿ: ಭಾರತದ ಜಿಮ್ನಾಸ್ಟಿಕ್ಸ್ ತಾರೆ ದೀಪಾ ಕರ್ಮಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತಾ ಕೂಟವಾಗಿದ್ದ ಎಫ್‌ಐಜಿ ಅಪಾರೆಟಸ್ ವಿಶ್ವಕಪ್‌ನಲ್ಲಿ ಮಹಿಳೆಯರ ವಾಲ್ಟ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಗಮನ ಸೆಳೆದರು.

30 ವರ್ಷದ ದೀಪಾ, ಕಳೆದ ತಿಂಗಳು ಅಜರ್‌ಬೈಜಾನ್‌ನಲ್ಲಿ ನಡೆದ ವಿಶ್ವಕಪ್‌ನಲ್ಲೂ ನಾಲ್ಕನೇ ಸ್ಥಾನ ಪಡೆದಿದ್ದರು. ಇಲ್ಲಿ ಕೂಡ 13.333 ಸ್ಕೋರ್‌ನೊಡನೆ ಸ್ವಲ್ಪದರಲ್ಲೇ ಪದಕ ತಪ್ಪಿಸಿಕೊಂಡರು.

ಪನಾಮಾದ ನವಾಸ್ ಕಾರ್ಲಾ (13.850) ಚಿನ್ನದ ಪದಕ ಗೆದ್ದರೆ, ಕೊರಿಯಾದ ಅನ್ ಚಾಂಗ್ ಓಕೆ (13.833) ಬೆಳ್ಳಿ ಮತ್ತು ಜಾರ್ಜಿಯಾದ ವೆಲೆಂಟಿನಾ (13.466) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಪ್ಯಾರಿಸ್ ಒಲಿಂಪಿಕ್ಸ್ ಕ್ವಾಲಿಫೈರ್‌ನ ಅರ್ಹತಾ ಸುತ್ತಿನಲ್ಲಿ ದೀಪಾ ಆರನೇ ಸ್ಥಾನ ಪಡೆದಿದ್ದರು.

ಮೊಣಕಾಲಿನ ಗಾಯಕ್ಕೆ (ಎಸಿಎಲ್) 2017 ಮತ್ತು 2019ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ದೀಪಾ, ನಂತರ ಉದ್ದೀಪನ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿ 21 ತಿಂಗಳ ನಿಷೇಧ ಅನುಭವಿಸಿದ್ದರು.

ಕಣದಲ್ಲಿದ್ದ ಭಾರತದ ಇನ್ನೊಬ್ಬ ಜಿಮ್ನಾಸ್ಟ್ ಪ್ರಣತಿ ನಾಯಕ್ ಅವರು ಫೈನಲ್‌ಗೆ ಅರ್ಹತೆ ಪಡೆಯಲು ವಿಫಲರಾದರು. ಅರ್ಹತಾ ಸುತ್ತಿನಲ್ಲಿ ಅವರು 11ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.

ಉಜ್ಬೇಕಿಸ್ತಾನದಲ್ಲಿ ಮೇ 16 ರಿಂದ 19ರವರೆಗೆ ನಡೆಯಲಿರುವ ಏಷ್ಯನ್ ಚಾಂಪಿಯನ್‌ಷಿಪ್, ಪ್ಯಾರಿಸ್ ಒಲಿಂಪಿಕ್ಸ್‌ಗೆ ಅಂತಿಮ ಅರ್ಹತಾ ಟೂರ್ನಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.