ನವದೆಹಲಿ: ಕನ್ನಡಿಗ ಡಿ.ಪಿ. ಮನು ಅವರು ಶನಿವಾರ ತೈವಾನ್ ಓಪನ್ ಕೂಟದ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 81.58 ಮೀಟರ್ ಸಾಧನೆಯೊಂದಿಗೆ ಚಿನ್ನ ಗೆದ್ದರು.

ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಪಿಪ್‌ನ ಬೆಳ್ಳಿ ವಿಜೇತ ಮನು, ಆರು ಪ್ರಯತ್ನಗಳ ಪೈಕಿ ಕೊನೆಯ ಯತ್ನದಲ್ಲಿ ಅತ್ಯುತ್ತಮ ಎಸೆತವನ್ನು ದಾಖಲಿಸಿದರು.

24 ವರ್ಷದ ಭಾರತದ ಅಥ್ಲೀಟ್, ಫೈನಲ್‌ನಲ್ಲಿ 78.32 ಮೀಟರ್ ಎಸೆತದೊಂದಿಗೆ ಅಭಿಯಾನ ಆರಂಭಿಸಿದರು. ಎರಡನೇ ಪ್ರಯತ್ನದಲ್ಲಿ 76.80 ಮೀ ದೂರ ಎಸೆದರು. ಮೂರನೇ ಮತ್ತು ಐದನೇ ಪ್ರಯತ್ನದಲ್ಲಿ ಕ್ರಮವಾಗಿ 80.59 ಮೀ ಮತ್ತು 81.52 ಮೀ ಎಸೆದು ಪ್ರಯತ್ನವನ್ನು ಸುಧಾರಿಸಿದರು. ನಾಲ್ಕನೇ ಯತ್ನದಲ್ಲಿ ಫೌಲ್ ಆದರು.

ಮನು ಅವರ ವೈಯಕ್ತಿಕ ಶ್ರೇಷ್ಠ ಪ್ರದರ್ಶನ 84.35 ಮೀಟರ್ ಆಗಿದೆ. ಕಳೆದ ತಿಂಗಳು ಭುವನೇಶ್ವರದಲ್ಲಿ ನಡೆದ ಫೆಡರೇಷನ್ ಕಪ್‌ನಲ್ಲಿ ಋತುವಿನ ಅತ್ಯುತ್ತಮ ಪ್ರಯತ್ನದೊಂದಿಗೆ (82.06 ಮೀ) ಅವರು ಬೆಳ್ಳಿ ಗೆದ್ದಿದ್ದರು. ಅಲ್ಲಿ ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಚಿನ್ನ ಗೆದ್ದಿದ್ದರು.

ಕಳೆದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಸ್ಥಾನ ಪಡೆದಿದ್ದ ಮನು ಅವರಿಗೆ ಪ್ಯಾರಿಸ್ ಒಲಿಂಪಿಕ್ಸ್ ಕೋಟಾ ಲಭಿಸಿಲ್ಲ. ಒಲಿಂಪಿಕ್ಸ್ ಅರ್ಹತಾ ಮಟ್ಟ (85.50 ಮೀ) ತಲುಪಲು ಅವರಿಗೆ ಸಾಧ್ಯವಾಗಿಲ್ಲ. ಹಾಲಿ ಚಾಂಪಿಯನ್ ಚೋಪ್ರಾ ಮತ್ತು ಒಡಿಶಾದ ಕಿಶೋರ್ ಜೇನಾ ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಪಡೆದಿದ್ದಾರೆ.

ಮಹಿಳೆಯರ 100 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ತಮಿಳುನಾಡಿನ ನಿತ್ಯಾ ರಾಮರಾಜ್ (13.23 ಸೆಕೆಂಡ್) ಎರಡನೇ ಸ್ಥಾನ ಪಡೆದರು. ಹಿಂದಿನ ದಿನದ ಹೀಟ್ಸ್‌ನಲ್ಲಿ ಅವರು (13.12 ಸೆ) ವೈಯಕ್ತಿಕ ಅತ್ಯುತ್ತಮ ಓಟವನ್ನು ದಾಖಲಿಸಿದ್ದರು. ಮಹಿಳೆಯರ 400 ಮೀ ಓಟದ ಫೈನಲ್‌ನಲ್ಲಿ ಕೇರಳದ ವಿ.ಕೆ. ವಿಸ್ಮಯಾ (53.49 ಸೆ) ಮೂರನೇ ಸ್ಥಾನ ಪಡೆದರು.

ಫೆಡರೇಷನ್ ಕಪ್ ವಿಜೇತೆ ತಮಿಳುನಾಡಿನ ರೋಸಿ ಮೀನಾ ಮಹಿಳೆಯರ ಪೋಲ್‌ವಾಲ್ಟ್ ಸ್ಪರ್ಧೆಯಲ್ಲಿ (3.75 ಮೀ) ಆರನೇ ಸ್ಥಾನ ಪಡೆದರು.

ತೈವಾನ್ ಓಪನ್, ವಿಶ್ವ ಅಥ್ಲೆಟಿಕ್ಸ್‌ನ ಕಾಂಟಿನೆಂಟಲ್ ಟೂರ್‌ನ ಭಾಗವಾಗಿದೆ. ಅಥ್ಲೀಟ್‌ಗಳು ನಿರ್ಣಾಯಕ ರ‍್ಯಾಂಕಿಂಗ್ ಪಾಯಿಂಟ್ಸ್ ಪಡೆಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.