ಮ್ಯಾಡ್ರಿಡ್: ಮೊದಲ ಬಾರಿ ಹಾಫ್ ಮ್ಯಾರಥಾನ್ನಲ್ಲಿ ಪಾಲ್ಗೊಂಡ ಇಥಿಯೋಪಿಯಾದ ಲೆಟೆಸೆನ್ಬೆಟ್ ಗಿಡಿ ಮಹಿಳಾ ವಿಭಾಗದ ವಿಶ್ವದಾಖಲೆ ಮುರಿದು ಚಾಂಪಿಯನ್ ಆದರು.

ಭಾನುವಾರ ಶುಭ್ರ ಬೆಳಕಿನಲ್ಲಿ ನಡೆದ ವೆಲೆನ್ಸಿಯಾ ಚಾಂಪಿಯನ್ಷಿಪ್ನಲ್ಲಿ ಒಂದು ತಾಸು ಎರಡು ನಿಮಿಷ 52 ಸೆಕೆಂಡುಗಳಲ್ಲಿ 23 ವರ್ಷದ ಗಿಡಿ ಗುರಿ ಮುಟ್ಟಿದರು. ಈ ಮೂಲಕ ಒಂದು ನಿಮಿಷದ ಅಂತರದಲ್ಲಿ ಹಿಂದಿನ ದಾಖಲೆ ಮುರಿದರು.

ಕೆನ್ಯಾದ ರೂಥ್ ಚೆಪನ್ಗೆಟಿಚ್ ಈ ವರ್ಷದ ಏಪ್ರಿಲ್ನಲ್ಲಿ ದಾಖಲೆ ಬರೆದಿದ್ದರು. 5000 ಮೀಟರ್ಸ್ ಮತ್ತು10,000 ಮೀಟರ್ಸ್ ಒಟದಲ್ಲೂ ಅವರು ವಿಶ್ವ ದಾಖಲೆ ಬರೆದಿದ್ದಾರೆ. 2020ರಲ್ಲಿ ವೆಲೆನ್ಸಿಯಾದಲ್ಲೇ ಅವರು5000 ಮೀಟರ್ಸ್ ದಾಖಲೆ ಮಾಡಿದ್ದರು.

ಮೊದಲ 10 ಕಿಲೋಮೀಟರ್ಸ್ ದೂರವನ್ನು 29 ನಿಮಿಷ 45 ಸೆಕೆಂಡುಗಳಲ್ಲಿ ಕ್ರಮಿಸಿದ ಅವರು ನಂತರ ಇನ್ನಷ್ಟು ವೇಗ ಪಡೆದುಕೊಂಡು ಗುರಿಯತ್ತ ಮುನ್ನುಗ್ಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.