ಅಥೆನ್ಸ್: ಕಾನಸ್ಟೆಂಟಿನೊಸ್ ಕೆಲಾಜೊಸ್ ಮತ್ತು ಗ್ಲೋರಿಯಾ ಟಿಜಿಯೊವನ್ ಪ್ರಿವಿಲಿಗಿಯೊ ಭಾನುವಾರ ನಡೆದ 38ನೇ ಅಥೆನ್ಸ್ ಮ್ಯಾರಥಾನ್ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.

31 ವರ್ಷದ ಗ್ರೀಕ್ ಓಟಗಾರ ಕೆಲಾಜೊಸ್ 42 ಕಿ.ಮೀ ದೂರವನ್ನು 2 ಗಂಟೆ, 16 ನಿಮಿಷ ಮತ್ತು 49 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು. ಇದರೊಂದಿಗೆ 2004ರ ಅಥೆನ್ಸ್ ಒಲಿಂಪಿಕ್ಸ್ನಲ್ಲಿ ನಿಕೊಸ್ ಪೊಲಿಯಾಸ್ ಅವರು ಮಾಡಿದ್ದ (2ನಿ, 17ನಿ, 26ಸೆ) ದಾಖಲೆಯನ್ನು ಅಳಿಸಿಹಾಕಿದರು.

ಗ್ರೀಸ್ನವರೇ ಆದ ಪೆನಾಜಿಯೊಟಿಸ್ ಪೌರಿಕಾಸ್ ಮತ್ತು ಚಾರ್ಲಾಂಪೊಸ್ ಪಿಸ್ತೊಲಿಸ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲಿಯೂ ಗ್ರೀಸ್ ದೇಶದ ಗ್ಲೋರಿಯಾ (2ಗಂ, 41ನಿ,30ಸೆ) ಮೊದಲ ಸ್ಥಾನ ಪಡೆದರು.

ವಿದೇಶಿ ಓಟಗಾರರು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಆತಿಥೇಯ ದೇಶದ ಅಥ್ಲೀಟ್ಗಳು ಪಾರಮ್ಯ ಮೆರೆದರು. ಎರಡು ವರ್ಷಗಳ ನಂತರ ನಡೆದ ಸ್ಪರ್ಧೆಯಲ್ಲಿ 2555 ಸ್ಪರ್ಧಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.