ನವದೆಹಲಿ: ಗ್ರ್ಯಾಂಡ್ ಮಾಸ್ಟರ್ಗಳಾದ ಕೊನೇರು ಹಂಪಿ, ಹರಿಕಾ ದ್ರೋಣವಳ್ಳಿ ಮತ್ತು ಆರ್. ವೈಶಾಲಿ ಅವರು 2024-2025ರ ಫಿಡೆ ಮಹಿಳಾ ಗ್ರ್ಯಾನ್ಪ್ರೀ ಸರಣಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ಅರ್ಹತಾ ನಿಯಮಗಳನ್ನು ಪೂರೈಸಿದ ಬಳಿಕ ಎಲ್ಲಾ 14 ಆಟಗಾರ್ತಿಯರು ಮಹಿಳಾ ಗ್ರ್ಯಾನ್ಪ್ರೀನಲ್ಲಿ ತಮ್ಮ ಸ್ಥಾನ ಗಳಿಸಿದ್ದಾರೆ. ಉಳಿದ ಆರು ಆಟಗಾರರನ್ನು ಪ್ರತಿ ಆರು ಟೂರ್ನಿಗಳ ಸಂಘಟಕರು ನಾಮನಿರ್ದೇಶನ ಮಾಡುತ್ತಾರೆ.

ತಾನ್ ಝೊಂಗ್ಯಿ (2017-2018), ಅಲೆಕ್ಸಾಂಡ್ರಾ ಕೊಸ್ಟೆನಿಕ್ (2008-2010) ಮತ್ತು ಮರಿಯಾ ಮುಜಿಚುಕ್ (2015-2016) ಎಂಬ ಮೂವರು ಮಹಿಳಾ ವಿಶ್ವ ಚಾಂಪಿಯನ್ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಅವರೊಂದಿಗೆ ಮಾಜಿ ರ್ಯಾಪಿಡ್ ವಿಶ್ವ ಚಾಂಪಿಯನ್ ಹಂಪಿ, ಕ್ಯಾಟರಿನಾ ಲಗ್ನೊ ಮತ್ತು ಅನ್ನಾ ಮುಜಿಚುಕ್ ಸೇರಿದ್ದಾರೆ.

ಹಾಲಿ ಚಾಂಪಿಯನ್ ಜು ವೆಂಜುನ್ ಈ ಸರಣಿಯಲ್ಲಿ ಭಾಗವಹಿಸುತ್ತಿಲ್ಲ. ಅವರ ಬದಲಿಗೆ ಮಹಿಳಾ ವಿಶ್ವ ರ್ಯಾಪಿಡ್ ಮತ್ತು ಮಹಿಳಾ ವಿಶ್ವ ಬ್ಲಿಟ್ಜ್ ಚಾಂಪಿಯನ್ಷಿಪ್ 2018ರ ರನ್ನರ್ ಅಪ್ ಸರಸಾದತ್ ಖಡೆಮಲ್ಶರೀಹ್ ಅವರನ್ನು ಆಯ್ಕೆ ಮಾಡಲಾಗಿದೆ.

2023ರ ಅಕ್ಟೋಬರ್ನಲ್ಲಿ ಫಿಡೆ ಮಹಿಳಾ ಗ್ರ್ಯಾಂಡ್ ಮಾಸ್ಟರ್ಸ್ (ಡಬ್ಲ್ಯುಜಿಪಿ) ನಿಯಮಗಳ ಕೂಲಂಕಷ ಪರಿಶೀಲನೆಯನ್ನು ಘೋಷಿಸಿತು. ಹಿಂದಿನ ಸರಣಿಗೆ ಹೋಲಿಸಿದರೆ, ಮುಂಬರುವ ಡಬ್ಲ್ಯುಜಿಪಿ ಸರಣಿಯು ಹಲವಾರು ಸುಧಾರಣೆಗಳನ್ನು ಹೊಂದಿದೆ.

ಟೂರ್ನಿಗಳ ಸಂಖ್ಯೆಯು ನಾಲ್ಕರಿಂದ ಆರಕ್ಕೆ ಏರಿದೆ ಮತ್ತು ಭಾಗವಹಿಸುವವರ ಸಂಖ್ಯೆಯೂ 16 ರಿಂದ 20ಕ್ಕೇರಿದೆ. ಇದಲ್ಲದೆ, ಬಹುಮಾನದ ಮೊತ್ತವನ್ನು ಸಹ ಹೆಚ್ಚಿಸಲಾಗಿದೆ.

ಫಿಡೆ ಸಿಇಒ ಎಮಿಲ್ ಸುಟೊವ್ಸ್ಕಿ, ಸ್ಪರ್ಧೆಗೆ ಅರ್ಹತೆ ಪಡೆದ ಆಟಗಾರರನ್ನು ಅಭಿನಂದಿಸಿದರು ಮತ್ತು ಮಹಿಳಾ ಚೆಸ್ಗೆ ಡಬ್ಲ್ಯುಜಿಪಿಯ ಮಹತ್ವವನ್ನು ತಿಳಿಸಿದರು.

‘ಫಿಡೆಯ ಪ್ರಮುಖ ಗಮನದ ಕ್ಷೇತ್ರವೆಂದರೆ ಮಹಿಳಾ ಚೆಸ್. ಹೆಚ್ಚಿನ ಮಹಿಳೆಯರು ಆಡಬೇಕೆಂದು ಬಯಸುತ್ತೇವೆ ಮತ್ತು ಅವರು ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂಬುದನ್ನು ಬಯಸುತ್ತೇವೆ. ನಮ್ಮ ಮಹಿಳಾ ಆಟಗಾರ್ತಿಯರು ಇದಕ್ಕೆ ಅರ್ಹರು ಮತ್ತು ಇದು ಹೊಸ ಪೀಳಿಗೆಗೆ ಪ್ರೋತ್ಸಾಹಕವಾಗಿಯೂ ಕಾರ್ಯನಿರ್ವಹಿಸುತ್ತದೆ’ ಎಂದು ಸುಟೊವ್ಸ್ಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟೊರೆಂಟೊದಲ್ಲಿ ನಡೆದ ಫಿಡೆ ಕ್ಯಾಂಡಿಡೇಟ್ಸ್ ಪಂದ್ಯಾವಳಿಯ ಮಹಿಳಾ ವಿಭಾಗದಲ್ಲಿ ಹಂಪಿ ಎರಡನೇ ಸ್ಥಾನ ಗಳಿಸಿದರೆ, ವೈಶಾಲಿ ನಾಲ್ಕನೇ ಸ್ಥಾನ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.