ಬೆಂಗಳೂರು: ‘ಆಟಗಾರ ಹಾಗೂ ತರಬೇತುದಾರನಾಗಿ ಭಾರತದ ಬ್ಯಾಡ್ಮಿಂಟನ್ಗೆ ಪುಲ್ಲೇಲ ಗೋಪಿಚಂದ್ ಅವರು ನೀಡಿರುವ ಕೊಡುಗೆಯ ಬಗ್ಗೆ ನಮಗೆ ಗೌರವವಿದೆ. ಅವರಿಂದ ತರಬೇತಾದ ಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ತೋರಿದ ಸಾಧನೆಯನ್ನೂ ಪರಿಗಣಿಸುತ್ತೇವೆ’ ಎಂದು ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ (ಪಿಪಿಬಿಎ) ಹೇಳಿದೆ.

ಗೋಪಿಚಂದ್ ಅವರು ಕೃತಿಯೊಂದರಲ್ಲಿ, ಆರು ವರ್ಷಗಳ ಹಿಂದೆ ಸೈನಾ ನೆಹ್ವಾಲ್ ತಮ್ಮ ಅಕಾಡೆಮಿಯಿಂದ ಪಡುಕೋಣೆ ಅಕಾಡೆಮಿಗೆ ತೆರಳಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದಕ್ಕೆ ಸಂಬಂಧಿಸಿಅಕಾಡೆಮಿ ಸೋಮವಾರ ಸ್ಪಷ್ಟನೆ ನೀಡಿದೆ.

‘ಬೆಂಗಳೂರಿಗೆ ಬಂದು ಪಿಪಿಬಿಎಯಲ್ಲಿ ತರಬೇತಿ ಪಡೆಯುವ ಸೈನಾ ನಿರ್ಧಾರದಲ್ಲಿ ಅಕಾಡೆಮಿಯ ಪಾತ್ರವೇನೂ ಇಲ್ಲ. ಬೆಂಗಳೂರಿಗೆ ಬಂದು ನಿರ್ದಿಷ್ಟವಾಗಿ ವಿಮಲ್ ಕುಮಾರ್ ಅವರಿಂದ ತರಬೇತಿ ಪಡೆಯುವುದು ಸೈನಾ ಅವರ ವೈಯಕ್ತಿಕ ನಿರ್ಧಾರವಾಗಿತ್ತು. ಸೈನಾ, ಫಾರ್ಮ್ ಕುಸಿತದಿಂದ ಚೇತರಿಸಿಕೊಂಡು, ಮರಳಿ ವಿಶ್ವದ ಅಗ್ರಪಟ್ಟಕ್ಕೇರಲು ವಿಮಲ್ ಕುಮಾರ್ ನೆರವಾಗಿದ್ದಾರೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಅವಧಿಯಲ್ಲಿ ಸೈನಾ ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿಯ ಪದಕವನ್ನೂ ಗೆದ್ದುಕೊಂಡಿದ್ದರು.

ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.