ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಜಯಿಸಿದ ನೀರಜ್ ಚೋಪ್ರಾ ಮತ್ತು ಭಾರತ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಸೇರಿದಂತೆ 12 ಸಾಧಕರಿಗೆ ಶನಿವಾರ ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದೇ ಮೊದಲ ಬಾರಿಗೆ ದಾಖಲೆ ಸಂಖ್ಯೆಯಲ್ಲಿ 12 ಮಂದಿಗೆ ಖೇಲ್ ರತ್ನ ಮತ್ತು 35 ಸಾಧಕರಿಗೆ ಅರ್ಜುನ ಪ್ರಶಸ್ತಿ ಪ್ರದಾನ ಮಾಡಲಾಯಿತು. 10 ಜನ ತರಬೇತುದಾರರಿಗೆ ದ್ರೋಣಾಚಾರ್ಯ ಪುರಸ್ಕಾರ ನೀಡಲಾಯಿತು. ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರಿಗೂ ಖೇಲ್ ರತ್ನ ನೀಡಿ ಗೌರವಿಸಲಾಯಿತು. ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದ ಐಎಎಸ್ ಅಧಿಕಾರಿ, ಕನ್ನಡಿಗ ಸುಹಾಸ್ ಯತಿರಾಜ್ ಮತ್ತು ಕ್ರಿಕೆಟಿಗ ಶಿಖರ್ ಧವನ್ ಅವರಿಗೆ ಅರ್ಜುನ ಪ್ರಶಸ್ತಿ ನೀಡಲಾಯಿತು. ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರತಿವರ್ಷ ಆಗಸ್ಟ್ 29ರಂದು ಮೇಜರ್ ಧ್ಯಾನಚಂದ್ ಜನ್ಮದಿನದಂಗವಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಟೋಕಿಯೊ ಪ್ಯಾರಾಲಿಂಪಿಕ್ಸ್ ಇದ್ದ ಕಾರಣಕ್ಕೆ ಮುಂದೂಡಲಾಗಿತ್ತು.

ಪ್ರಶಸ್ತಿ ಪುರಸ್ಕೃತರು:

ಮೇಜರ್ ಧ್ಯಾನಚಂದ್ ಖೇಲ್‌ರತ್ನ: ನೀರಜ್ ಚೋಪ್ರಾ (ಅಥ್ಲೆಟಿಕ್ಸ್), ರವಿಕುಮಾರ್ (ಕುಸ್ತಿ), ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್), ಪಿ.ಆರ್. ಶ್ರೀಜೇಶ್ (ಹಾಕಿ), ಅವನಿ ಲೇಖರಾ (ಪ್ಯಾರಾಶೂಟಿಂಗ್), ಸುಮಿತ್ ಅಂಟಿಲ್ (ಪ್ಯಾರಾ ಅಥ್ಲೆಟಿಕ್ಸ್), ಪ್ರಮೋದ್ ಭಗತ್, ಕೃಷ್ಣ ನಾಗರ್ (ಇಬ್ಬರೂ ಪ್ಯಾರಾ ಬ್ಯಾಡ್ಮಿಂಟನ್), ಮನೀಷ್ ನರ್ವಾಲ್ (ಪ್ಯಾರಾ ಶೂಟಿಂಗ್), ಮಿಥಾಲಿ ರಾಜ್ (ಕ್ರಿಕೆಟ್), ಸುನೀಲ್ ಚೆಟ್ರಿ (ಫುಟ್‌ಬಾಲ್), ಮನ್‌ಪ್ರೀತ್ ಸಿಂಗ್ (ಹಾಕಿ).

ಅರ್ಜುನ್ ಪ್ರಶಸ್ತಿ: ದಿಲ್‌ಪ್ರೀತ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ಬಿರೇಂದ್ರ ಲಕ್ರಾ, ಸುಮಿತ್, ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಗುರ್ಜಂತ್ ಸಿಂಗ್, ಮನದೀಪ್ ಸಿಂಗ್, ಶಂಶೇರ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ವರುಣಕುಮಾರ್, ಸಿಮ್ರನ್‌ಜೀತ್ ಸಿಂಗ್ (ಎಲ್ಲರೂ ಹಾಕಿ), ಅರ್ಪಿಂದರ್ ಸಿಂಗ್ (ಅಥ್ಲೆಟಿಕ್ಸ್), ಸಿಮ್ರನ್‌ಜೀತ್ ಕೌರ್ (ಬಾಕ್ಸಿಂಗ್), ಶಿಖರ್ ಧವನ್ (ಕ್ರಿಕೆಟ್), ಸಿ.ಎ. ಭವಾನಿದೇವಿ (ಫೆನ್ಸಿಂಗ್), ಮೋನಿಕಾ (ಹಾಕಿ), ವಂದನಾ ಕಟಾರಿಯಾ (ಹಾಕಿ), ಸಂದೀಪ್ ನರ್ವಾಲ್ (ಕಬಡ್ಡಿ), ಹಿಮಾನಿ ಉತ್ತಮ್ ಪರಬ್ (ಮಲ್ಲಕಂಬ), ಅಭಿಷೇಕ್ ವರ್ಮಾ (ಶೂಟಿಂಗ್), ಅಂಕಿತಾ ರೈನಾ (ಟೆನಿಸ್), ದೀಪಕ್ ಪೂನಿಯಾ (ಕುಸ್ತಿ), ಯೋಗೇಶ್ ಖತುನಿಯಾ, ನಿಶಾದ್ ಕುಮಾರ್, (ಪ್ಯಾರಾ ಅಥ್ಲೆಟಿಕ್ಸ್), ಸುಹಾಸ್ ಯತಿರಾಜ್ (ಪ್ಯಾರಾ ಬ್ಯಾಡ್ಮಿಂಟನ್), ಸಿಂಗರಾಜ್ ಅದಾನಾ (ಪ್ಯಾರಾ ಶೂಟಿಂಗ್), ಭಾವಿನಾ ಪಟೇಲ್ (ಪ್ಯಾರಾ ಟಿಟಿ), ಹರವಿಂದರ್ ಸಿಂಗ್ (ಪ್ಯಾರಾ ಆರ್ಚರಿ), ಶರದ್ ಕುಮಾರ್(ಪ್ಯಾರಾ ಅಥ್ಲೆಟಿಕ್ಸ್).

ದ್ರೋಣಾಚಾರ್ಯ ಪ್ರಶಸ್ತಿ: ರಾಧಾಕೃಷ್ಣನ್ ನಾಯರ್ ಪಿ (ಅಥ್ಲೆಟಿಕ್ಸ್), ಸಂಧ್ಯಾ ಗುರುಂಗ್ (ಬಾಕ್ಸಿಂಗ್), ಪ್ರತೀತ್ ಸಿವಾಚ್ (ಹಾಕಿ), ಜೈಪ್ರಕಾದ್ ನೌತಾಲಿಯಾ (ಪ್ಯಾರಾಶೂಟಿಂಗ್), ಸುಬ್ರಮಣಿಯನ್ ರಾಮನ್ (ಟಿಟಿ). ಜೀವಮಾನ ಸಾಧನೆ ವಿಭಾಗ: ಟಿ.ಪಿ. ಔಸೆಫ್ (ಅಥ್ಲಟಿಕ್ಸ್), ಸರ್ಕಾರ್ ತಲ್ವಾರ್ (ಕ್ರಿಕೆಟ್), ಸರ್ಪಾಲ್ ಸಿಂಗ್ (ಹಾಕಿ), ಅಶನ್ ಕುಮಾರ್ (ಕಬಡ್ಡಿ), ತಪನ್ ಕುಮಾರ್ ಪಾಣಿಗ್ರಹಿ (ಈಜು).

ಮೇಜರ್ ಧ್ಯಾನಚಂದ್ ಪುರಸ್ಕಾರ: ಸಜ್ಜನ್ ಸಿಂಗ್(ಕುಸ್ತಿ), ಕೆ.ಸಿ. ಲೇಖಾ (ಬಾಕ್ಸಿಂಗ್), ಕೆ.ಸಿ. ಅಭಿಜಿತ್ ಕುಂಟೆ (ಚೆಸ್), ದೇವಿಂದರ್ ಸಿಂಗ್ ಗಾರ್ಚಾ (ಹಾಕಿ), ವಿಕಾಸ್ ಕುಮಾರ್ (ಕಬಡ್ಡಿ).

ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹಕ ಪುರಸ್ಕಾರ

ಮಾನವರಚನಾ ಶಿಕ್ಷಣ ಸಂಸ್ಥೆ ಮತ್ತು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್

ಮೌಲಾನಾ ಅಬುಲ್ ಕಲಾಂ ಆಜಾದ್ ಟ್ರೋಫಿ: ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಡ.

ನಗದು ಪುರಸ್ಕಾರ

ಖೇಲ್ ರತ್ನ; ₹ 25 ಲಕ್ಷ

ಅರ್ಜುನ; ₹ 15 ಲಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.