ಚೆಂಗ್ಡು (ಚೀನಾ): ಭಾರತ ತಂಡ, ಇಲ್ಲಿ ನಡೆಯುತ್ತಿರುವ ವಿಶ್ವ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ 20 ಕಿ.ಮೀ ಮಹಿಳೆಯರ ರೇಸ್ ವಾಕ್ ಸ್ಪರ್ಧೆಯಲ್ಲಿ ಶನಿವಾರ ಕಂಚಿನ ಪದಕ ಗೆದ್ದುಕೊಂಡಿದೆ.

ಪೂಜಾ ಕುಮಾವತ್, ನಿಕಿತಾ ಲಂಬಾ, ಮಾನಸಿ ನೇಗಿ ಮತ್ತು ಪ್ರಿಯಾಂಕಾ ಅವರನ್ನೊಳಗೊಂಡ ತಂಡ ಒಟ್ಟು 5 ಗಂಟೆ, 12 ನಿಮಿಷ 13 ಸೆಕೆಂಡು ತೆಗೆದುಕೊಂಡಿತು. ಚೀನಾ (4:52:02) ಮತ್ತು ಸ್ಲೊವಾಕಿಯಾ (5:05:36) ತಂಡಗಳು ಕ್ರಮವಾಗಿ ಸ್ವರ್ಣ ಮತ್ತು ಬೆಳ್ಳಿಯ ಪದಕ ಪಡೆದವು.

ಭಾರತ ಮತ್ತು ಚೀನಾ ತಂಡಗಳು ನಾಲ್ಕು ಮಂದಿ ಅಥ್ಲೀಟುಗಳನ್ನು ಕಣಕ್ಕಿಳಿಸಿದ್ದವು. ಉತ್ತಮ ಅವಧಿಯಲ್ಲಿ ಈ ದೂರ ಪೂರೈಸಿದ ಮೂವರ ಕಾಲಾವಧಿ ಲೆಕ್ಕಹಾಕಿ ಅಂತಿಮ ಸಮಯ ನಿರ್ಣಯಿಸಲಾಯಿತು. ಭಾರತದ ಅಥ್ಲೀಟುಗಳ ಪೈಕಿ ಪ್ರಿಯಾಂಕಾ 1ಗಂಟೆ 40ನಿಮಿಷ 39 ಸೆಕೆಂಡುಗಳಲ್ಲಿ ದೂರ ಕ್ರಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.