ಢಾಕಾ: ಉತ್ತಮ ಸಾಮರ್ಥ್ಯ ತೋರಿದ ಭಾರತದ ಪುರುಷ, ಮಹಿಳಾ ಮತ್ತು ಮಿಶ್ರ ವಿಭಾಗದ ತಂಡಗಳು ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ತಲುಪಿವೆ. ಇದರೊಂದಿಗೆ ಮಂಗಳವಾರ ಕನಿಷ್ಠ ಮೂರು ಪದಕಗಳನ್ನು ಖಚಿತಪಡಿಸಿದವು.

ಕಾಂಪೌಂಡ್ ವಿಭಾಗದ ಸೆಮಿಫೈನಲ್‌ಗಳಲ್ಲಿ ಸೋತ ಪುರುಷ, ಮಹಿಳಾ ಮತ್ತು ಮಿಶ್ರ ವಿಭಾಗದ ತಂಡಗಳೂ ಕನಿಷ್ಠ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಳ್ಳಲಿವೆ.

ಅಂಕಿತಾ ಭಕತ್, ಮಧು ವೇದ್ವಾನ್ ಹಾಗೂ ರಿಧಿ ಅವರಿದ್ದ ಮಹಿಳೆಯರ ತಂಡವು ಸೆಮಿಫೈನಲ್ ಹಣಾಹಣಿಯಲ್ಲಿ 6–0ಯಿಂದ ವಿಯೆಟ್ನಾಂ ತಂಡವನ್ನು ಸೋಲಿಸಿತು. ಕ್ವಾರ್ಟರ್‌ಫೈನಲ್‌ನಲ್ಲಿ ತಂಡಕ್ಕೆ ಬೈ ಸಿಕ್ಕಿತ್ತು. ಪುರುಷರ ರಿಕರ್ವ್ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ಪ್ರವೀಣ್ ಜಾಧವ್, ಕಪಿಲ್ ಹಾಗೂ ಪಾರ್ಥ್ ಸಾಳುಂಕೆ ಅವರಿದ್ದ ತಂಡವು ಬಾಂಗ್ಲಾದೇಶವನ್ನು ಮಣಿಸಿತು.

ಮಿಶ್ರ ವಿಭಾಗದ ಕಾಂಪೌಂಡ್ ಸ್ಪರ್ಧೆಯಲ್ಲಿ ರಿಷಭ್ ಯಾದವ್ ಹಾಗೂ ಜ್ಯೋತಿ ಸುರೇಖಾ ವೆನ್ನಂ ಅವರಿದ್ದ ತಂಡವು ಕಜಕಸ್ತಾನ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತು ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.