ಅಮ್ಮಾನ್ (ಜೋರ್ಡಾನ್): ಭಾರತದ ಗ್ರೀಕೊ ರೋಮನ್ ಕುಸ್ತಿಪಟುಗಳು, ಜೂನಿಯರ್ ಕುಸ್ತಿ ವಿಶ್ವ ಚಾಂಪಿಯನ್ಷಿಪ್ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದರು. ಐದು ಮಂದಿ ಪೈಲ್ವಾನರಿಗೆ ಕ್ವಾರ್ಟರ್ಫೈನಲ್ ಹಂತ ದಾಟಲೂ ಸಾಧ್ಯವಾಗಲಿಲ್ಲ.

ಅನಿಲ್ ಮೊರ್ ಅವರು ಜಾರ್ಜಿಯಾದ ಲುಕಾ ಜವಾಖಾಡ್ಜೆ ಮತ್ತು ಉಕ್ರೇನ್ನ ಮಾರ್ಕೊ ವೊಲೊಷಿನ್ ಅವರನ್ನು ಸೋಲಿಸಿದರೂ, ಎಂಟರ ಘಟ್ಟದಲ್ಲಿ ಕಿರ್ಗಿಸ್ತಾನದ ನುರಿಸ್ತಾನ್ ಸುಯಿರ್ಕುಲೊವ್ ವಿರುದ್ಧ 6–7 ಅಂತರದಿಂದ ಸೋಲನುಭವಿಸಿದರು.

63 ಕೆ.ಜಿ. ವಿಭಾಗದಲ್ಲಿ ಸಂದೀಪ್ 0–10 ಅಂಕಗಳಿಂದ ಇರಾನ್ನ ಸೀಫೊಲ್ಲಾ ಮೊಹ್ಸೆನ್ ನೆಝಾದ್ ಅವರಿಗೆ ಮಣಿದರು.

77 ಕೆ.ಜಿ. ವಿಭಾಗದಲ್ಲಿ ದೀಪಕ್ ಪೂನಿಯಾ, ಇರಾನ್ನ ಅಲಿರೇಜಾ ಮೊರಾದ್ ಅಬ್ದೆವಲಿ ಅವರಿಗೆ ಸಾಟಿಯಾಗಲಿಲ್ಲ. ಇರಾನ್ನ ಪೈಲ್ವಾನ್ 8–0ಯಿಂದ ಗೆದ್ದರು. 87 ಕೆ.ಜಿ. ವಿಭಾಗದಲ್ಲಿ ಮೋಹಿತ್ ಕಕ್ಕರ್ ಮೊದಲ ಸುತ್ತಿನಲ್ಲಿ ಅಮೆರಿಕದ ಜಾಣ್ ವೋಲ್ಕರ್ ಅವರೆದುರು ಪರಾಭವಗೊಂಡರು. 130 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಪರ್ವೇಶ್ 0–8 ರಿಂದ ಜಾರ್ಜಿಯಾದ ಲುಕಾ ಗಬಿಸೋನಿಯಾ ಎದುರು ಸೋಲನುಭವಿಸಿದರು.

ಮೊರ್, ಪೂನಿಯಾ ಮತ್ತು ಪರ್ವೇಶ್ ಅವರನ್ನು ಸೋಲಿಸಿದ ಪೈಲ್ವಾನರು ಫೈನಲ್ ತಲುಪಿದ ಪಕ್ಷದಲ್ಲಿ ಈ ಮೂವರಿಗೆ ರಿಪೇಜ್ ಮೂಲಕ ಪದಕದ ಅವಕಾಶ ಜೀವಂತವಾಗಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.