ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯದ ನರೇಂದ್ರ ಪ್ರತಾಪ್ ಸಿಂಗ್ 80ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಕೂಟದ ನಾಲ್ಕನೇ ದಿನವಾದ ಭಾನುವಾರ ಪುರುಷರ ವಿಭಾಗದ 5000 ಮೀಟರ್ ಓಟದ ಸ್ಪರ್ಧೆಯಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿ ಚಿನ್ನದ ಪದಕ ಗಳಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಕಾಲೇಜು ಸಹಯೋಗದಲ್ಲಿ ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ ಈ ಕೂಟದಲ್ಲಿ, ಆಳ್ವಾಸ್ ಕಾಲೇಜಿನ ನರೇಂದ್ರ ಪ್ರತಾಪ್ ಸಿಂಗ್ 5,000 ಮೀಟರ್ ದೂರವನ್ನು 14 ನಿಮಿಷ 17.77 ಸೆಕೆಂಡ್ಗಳಲ್ಲಿ ಕ್ರಮಿಸಿ ಹೊಸ ದಾಖಲೆ ಬರೆದರು. ಈ ಹಿಂದಿನ ದಾಖಲೆಯು ಪಂಜಾಬ್ ವಿಶ್ವವಿದ್ಯಾಲಯದ ಸುರೇಶ್ ಕುಮಾರ್ (ಕಾಲ: 14 ನಿಮಿಷ 19.39 ಸೆಕೆಂಡ್) ಅವರ ಹೆಸರಿನಲ್ಲಿ ಇತ್ತು.

ಇದೇ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಆಳ್ವಾಸ್ ಕಾಲೇಜಿನವರೇ ಆದ ಅದೇಶ್ (ಕಾಲ: 14 ನಿಮಿಷ 30:02 ಸೆಕೆಂಡ್) ಎರಡನೇಯವರಾಗಿ ಗುರಿ ತಲುಪಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡರು. ಆಳ್ವಾಸ್ ಕಾಲೇಜಿನ ಮನು ಡಿ. ಪಿ ಪುರುಷರ ವಿಭಾಗದ ಜಾವೆಲಿನ್ ಥ್ರೋನಲ್ಲಿ 73.94 ಮೀಟರ್ ದೂರ ಎಸೆದು ಮೊದಲ ಸ್ಥಾನದ ಜತೆಗೆ ಚಿನ್ನದ ಪದಕ ಗಳಿಸಿದರು.

ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ಜ್ಯೋತಿ ವೈ. ಮಹಿಳೆಯರ ವಿಭಾಗದ 100 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ 13.037 ಸೆಕೆಂಡ್ಗಳಲ್ಲಿ ಗುರಿಮುಟ್ಟಿ ನೂತನ ಕೂಟ ದಾಖಲೆ ಸ್ಥಾಪಿಸಿ ಚಿನ್ನ ಮುಡಿಗೇರಿಸಿಕೊಂಡರು. ಈ ಹಿಂದಿನ ದಾಖಲೆ, ಜಿ. ಗಾಯತ್ರಿ (ಮದ್ರಾಸ್ ವಿವಿ) ಹಾಗೂ ಸಪ್ನ ಕುಮಾರಿ ( ವಿನೋಬಾ ಭಾವೆ ವಿವಿ ಹರಿಯಾಣ) (ಕಾಲ: 13.72 ಸೆ) ಅವರ ಹೆಸರಲ್ಲಿ ಇತ್ತು.

ಸಾವಿತ್ರಿ ಬಾಯಿ ಫುಲೆ ವಿಶ್ವವಿದ್ಯಾಲಯದ ಕೋಮಲ ಜಗದಾಳೆ ಶನಿವಾರ, ಸ್ಟೀಪಲ್ ಚೇಸ್ನಲ್ಲಿ ಕೂಟ ದಾಖಲೆ ನಿರ್ಮಿಸಿದ್ದು. ಭಾನುವಾರವೂ 5,000 ಮೀಟರ್ ಮಹಿಳೆಯರ ಓಟದ ಸ್ಪರ್ಧೆಯಲ್ಲಿ ಮೊದಲಿಗರಾಗಿ ಎಲ್ಲರ ಗಮನ ಸೆಳೆದು ಚಿನ್ನದ ಪದಕ ಪಡೆದರು.ನಾಲ್ಕನೇ ದಿನದ ಸ್ಪರ್ಧೆಗಳ ನಂತರ ಮಂಗಳೂರು ವಿಶ್ವವಿದ್ಯಾಲಯ ಒಟ್ಟು 127 ಪಾಯಿಂಟ್(ಕೂಟ ದಾಖಲೆ–3, 6 ಚಿನ್ನ, 9 ಬೆಳ್ಳಿ, 4 ಕಂಚು) ದಾಖಲಿಸಿ ಅಗ್ರ ಸ್ಥಾನದಲ್ಲಿದೆ. ಮದ್ರಾಸ್ ವಿಶ್ವವಿದ್ಯಾಲಯ 70 ಮತ್ತು ಮಹಾತ್ಮ ಗಾಂಧಿ ಕೊಟ್ಟಾಯಂ– 47, ರೋಹ್ಟಕ್ನ ಮಹರ್ಷಿ ದಯಾನಂದ ವಿವಿ 40 ಪಾಯಿಂಟ್ಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ.

ನಾಲ್ಕನೇ ದಿನದ ಫಲಿತಾಂಶಗಳು:

ಪುರುಷರು: 110 ಮೀ ಹರ್ಡಲ್ಸ್ : ಎಲ್ದನ್ ನರೋನ್ಹಾ (ಕಾಲ: 14.26ಸೆ; ಮುಂಬೈ ವಿವಿ) - 1, ದೇವಾರ್ಜುನ್ ಮುರ್ಮು - (ಮಂಗಳೂರು ವಿವಿ) -2, ರೊನಾಲ್ಡ್ ಬಾಬು -(ಮಹಾತ್ಮಗಾಂಧಿ ವಿವಿ, ಕೊಟಯಂ)– 3. 3000 ಮೀ ಸ್ಟೀಪಲ್ ಚೇಸ್: ಅತುಲ್ ಪೂನಿಯಾ (ಕಾಲ: 9 ನಿ, 20:03 ಸೆ; ಮಹಾರಾಜ ಗಂಗಾಸಿಂಗ್ ವಿವಿ ) - 1, ಪ್ರಿನ್ಸ್ರಾಜ್ ಮಿಶ್ರಾ – (ಎಲ್ಎನ್ಐಪಿ, ಗ್ವಾಲಿಯರ್) - 2, ಸುಮಿತ್ ಕುಮಾರ್ – (ಪಂಜಾಬ್ ವಿ ವಿ, ಚಂಡೀಗಡ) -3, 5000 ಮೀ. ಓಟ: ನರೇಂದ್ರ ಪ್ರತಾಪ್ ಸಿಂಗ್ – (ನೂತನ ದಾಖಲೆ: ಕಾಲ: 14 ನಿ, 17.77 ಸೆ,ಮಂಗಳೂರು ವಿಶ್ವವಿದ್ಯಾಲಯ; ಹಳೆಯದು:14 ನಿಮಿಷ 19:39 ಸೆಕೆಂಡ್, ಸುರೇಶ್ ಕುಮಾರ್, ಪಂಜಾಬ್ ವಿವಿ) - 1 ಅದೇಶ್ ಮಂಗಳೂರು ವಿವಿ) - 2, ತದ್ವಿ ಕಿಸನ್ (ಸಾವಿತ್ರಿ ಬಾಯಿ ಫುಲೆ ವಿಶ್ವವಿದ್ಯಾಲಯ)– 3, ಜಾವೆಲಿನ್ ಥ್ರೊ: ಮನು ಡಿ.ಪಿ (ದೂರ: 73.94 ಮೀಟರ್; ಮಂಗಳೂರು ವಿಶ್ವವಿದ್ಯಾಲಯ)–1, ಯಶ್ವೀರ್ ಸಿಂಗ್ (ಮಹರ್ಷಿ ದಯಾನಂದ ವಿಶ್ವವಿದ್ಯಾಲಯ)- 2, ಹರೀಶ್ ಕುಮಾರ್ (ಎಂಜಿಎಸ್ ವಿಶ್ವವಿದ್ಯಾಲಯ ಬಿಕಾನೇರ್) - 3.

ಮಹಿಳೆಯರು: 100 ಮೀ ಹರ್ಡಲ್ಸ್ : ಜ್ಯೋತಿ ವೈ (ನೂತನ ದಾಖಲೆ: ಕಾಲ: 13.037 ಸೆ; ಆಚಾರ್ಯ ನಾಗಾರ್ಜುನ ವಿವಿ, ಹಳೆಯದು: ಜಿ. ಗಾಯತ್ರಿ, ಕಾಲ: 13.72 ಸೆ ಮದ್ರಾಸ್ ವಿವಿ), ಸಪ್ನ ಕುಮಾರಿ ( ವಿನೋಬಾ ಭಾವೆ ವಿವಿ, ಹರಿಯಾಣ) -2, ಅಪರ್ಣಾ ರಾಯ್ ( ಕೇರಳ ವಿವಿ) -3. 5000 ಮೀ ಓಟ: ಕೋಮಲ್ ಜಗದಾಳೆ ( ಕಾಲ: 17 ನಿಮಿಷ 04.13 ಸೆ, ಸಾವಿತ್ರಿಬಾಯಿ ಪುಲೆ ವಿಶ್ವವಿದ್ಯಾಲಯ, ಪುಣೆ)– 1, ಕೆ. ಎಂ ಜ್ಯೋತಿ ( ಪಂಜಾಬ್ ವಿವಿ, ಚಂಡೀಗಡ)- 2, ಸೀಮಾ (ಪಂಜಾಬ್ ವಿವಿ, ಪಟಿಯಾಲ) - 3. ಜಾವೆಲಿನ್ ಥ್ರೋ: ಎನ್ ಹೇಮಾಮಾಲಿನಿ (48.81 ಮೀಟರ್ ಮದ್ರಾಸ್ ವಿವಿ) -1, ಮೋನಿಕಾ ( ಚೌಧರಿ ದೇವಿಲಾಲ್ ವಿವಿ) -2, ಮನ್ಪ್ರೀತ್ ಕೌರ್ ( ಗುರುನಾನಕ್ ದೇವ್ ವಿವಿ) - 3, ಶಾಟ್ಪಟ್: ಕಿರಣ್ ಬಲಿಯನ್ (ದೂರ: 15.69 ಮೀ, ಮೀರತ್ ವಿವಿ)– 1, ಪೂರ್ಣರಾವ್ ರಾಣಿ ( ಮುಂಬೈ ವಿವಿ) - 2, ಸೃಷ್ಟಿ ವಿಜ್ ( ಎಂಜೆಪಿ ವಿವಿ, ಬರೇಲಿ) -3, ಹೆಪ್ಟಾಥ್ಲಾನ್: ಸೋನು ಕುಮಾರಿ (ಪಾಯಿಂಟ್: 4640 ಲವ್ಲಿ ಫ್ರೊಫೆಶನಲ್ ವಿವಿ)-1, ರಿಂಪಿ ದಬಾಸ್ ( ಮಂಗಳೂರು ವಿವಿ) -2, ಮರಿಯಾ ಥಾಮಸ್ – (ಮಹಾತ್ಮಗಾಂಧಿ ವಿವಿ) -3, 4x 400 ಮೀ. ಮೀಶ್ರ ರಿಲೇ: ಕ್ಯಾಲಿಕಟ್ ವಿವಿ (ಕಾಲ: 3 ನಿಮಿಷ 24.65 ಸೆ)- 1, ಮಹಾತ್ಮಾ ಗಾಂಧಿ ವಿವಿ, ಕೊಟಯಂ ( ಕಾಲ: 3 ನಿಮಿಷ 27.94 ಸೆಕೆಂಡ್ )– 2, ಪಂಜಾಬ್ ವಿವಿ, ಪಟಿಯಾಲ ( ಕಾಲ: 3 ನಿಮಿಷ 28.1 8ಸೆಕೆಂಡ್ )- 3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.