ಮೂಡುಬಿದಿರೆ: ಕೇರಳದ ಕೋಟಯಂ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಸಿದ್ಧಾರ್ಥ ಎ.ಕೆ. ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ನ ಪೋಲ್‌ವಾಲ್ಟ್‌ನಲ್ಲಿ ಕೂಟ ದಾಖಲೆ ಸ್ಥಾಪಿಸಿದರು.

ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಕಾಲೇಜು ಸಹಯೋಗದಲ್ಲಿ ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ ಕೂಟದ ಮೂರನೇ ದಿನವಾದ ಗುರುವಾರ ಸಿದ್ಧಾರ್ಥ ಎ.ಕೆ ಕ್ಯಾಲಿಕಟ್ ವಿವಿಯ ಜೆಸ್ಸನ್ ಕೆ. ಜಿ ಅವರ ಹೆಸರಲ್ಲಿದ್ದ (4.91 ಮೀಟರ್) ದಾಖಲೆ ಮೀರಿ ನಿಂತರು. ಅವರು 4.92 ಮೀಟರ್ ಎತ್ತರ ಜಿಗಿದು ಚಿನ್ನಕ್ಕೆ ಮುತ್ತಿಟ್ಟರು.

ಈ ಸ್ಪರ್ಧೆಯ ಎರಡನೇ ಸ್ಥಾನವೂ ಇದೇ ವಿವಿ ಪಾಲಾಯಿತು. ಗಾಡ್ವಿನ್ ದಾಮಿಯನ್ ಅವರು ವಿವಿಗೆ ಬೆಳ್ಳಿ ಗಳಿಸಿಕೊಟ್ಟರು. ಜಾನ್‌ಪುರದ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿವಿಯ ಧೀರೇಂದ್ರ ಕುಮಾರ್ ಮೂರನೇ ಸ್ಥಾನ ಪಡೆದರು.

ಮೂರನೇ ದಿನ ಹರಿಯಾಣದ ಕುರುಕ್ಷೇತ್ರ ವಿಶ್ವವಿದ್ಯಾಲಯದ ಪ್ರಿನ್ಸ್ 5 ಸಾವಿರ ಮೀಟರ್ ಓಟದಲ್ಲಿ (14 ನಿಮಿಷ 5.48 ಸೆಕೆಂಡು) ದಾಖಲೆ ಮಾಡಿದರು. ಮಂಗಳೂರು ವಿವಿಯ ನರೇಂದ್ರ ಪ್ರತಾಪ್ ಅವರ ಹೆಸರಿನಲ್ಲಿ ಈ ದಾಖಲೆ ಇತ್ತು (14 ನಿಮಿಷ 17.77 ಸೆಕೆಂಡು). ಅಜಯ್ (ಲವ್ಲಿ ಪ್ರೊಫೆಷನಲ್ ವಿವಿ) ಹಾಗೂ ಲೋಕೇಶ್ ಚೌಧಾರ್ (ಮಹರ್ಷಿ ದಯಾನಂದ ವಿವಿ) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದರು.

ಫಲಿತಾಂಶಗಳು: ಪೋಲ್ ವಾಲ್ಟ್: ಸಿದ್ದಾರ್ಥ್ ಎ.ಕೆ ()–1, ಗಾಡ್ವಿನ್ ದಾಮಿಯನ್ (ಮಹಾತ್ಮ ಗಾಂಧಿ ವಿವಿ, ಕೋಟಯಂ)–2, ಧಿರೇಂದ್ರ ಕುಮಾರ್ (ಜಾನ್‌ಪುರದ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿವಿ)–3. 5000 ಮೀಟರ್ಸ್ ಓಟ: ಪ್ರಿನ್ಸ್ (ಕುರುಕ್ಷೇತ್ರ ವಿಶ್ವವಿದ್ಯಾಲಯ, ಹರಿಯಾಣ)–1, ಅಜಯ್ (ಲವ್ಲಿ ಪ್ರೊಫೆಷನಲ್ ವಿವಿ)–2, ಲೋಕೇಶ್ ಚೌಧಾರ್ (ಮಹರ್ಷಿ ದಯಾನಂದ ವಿವಿ)–3. 110 ಮೀಟರ್ ಹರ್ಡಲ್ಸ್: ಎಲ್. ಯಶ್‌ವಂತ್ ಕುಮಾರ್ (ಆಚಾರ್ಯ ನಾಗಾರ್ಜುನ ವಿವಿ)–1, ನಿಶಾಂತ್ ರಾಜ ಜಿ.(ಮದ್ರಾಸ್ ವಿವಿ)–2, ಮೊಹಮದ್ ಲಝಾನ್ (ಕೇರಳ ವಿವಿ)–3. ಕಾಲ: 14.32 ಸೆಕೆಂಡು; ಡಿಸ್ಕಸ್ ಥ್ರೋ: ವಿಕಾಸ್ (ಚೌಧರಿ ದೇವಿಲಾಲ್ ವಿವಿ)–1, ಅಭಿನವ್ (ಲವ್ಲಿ ಪ್ರೊಫೆಷನಲ್ ವಿವಿ)–2, ಭಾನು ಶರ್ಮಾ (ಮಂಗಳೂರು ವಿವಿ)–3. ಡೆಕಾಥ್ಲಾನ್: ಯಮನ್‌ದೀಪ್ ಶರ್ಮಾ (ಲವ್ಲಿ ಪ್ರೊಫೆಷನಲ್ ವಿವಿ)–1, ಸುನಿಲ್ ಕುಮಾರ್ (ಲವ್ಲಿ ಪ್ರೊಫೆಷನಲ್ ವಿವಿ)–2, ಸ್ಟ್ಯಾಲಿನ್ ಜೋಶ್(ತಮಿಳುನಾಡು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿವಿ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.