ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ಗೆ ತೆರಳಲಿರುವ ಆರು ಕುಸ್ತಿಪಟುಗಳಿಗೆ ಭಾರತ ಒಲಿಂಪಿಕ್ ಸಂಸ್ಥೆ ‘ಪೂರ್ಣಪ್ರಮಾಣದಲ್ಲಿ ಬೆಂಬಲ’ ನೀಡಲಿದೆ. ಹೆಚ್ಚಿನ ನೆರವು ಕೋರಿರುವ ಕುಸ್ತಿಪಟು ವಿನೇಶಾ ಫೋಗಾಟ್ ಅವರ ಮನವಿಗೆ ಕೂಡ ರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಸಮ್ಮತಿಸಿದೆ.

ಆರು ಮಂದಿ ಕುಸ್ತಿಪಟುಗಳು– ವಿನೇಶಾ ಫೋಗಾಟ್ (50 ಕೆ.ಜಿ), ಅಂತಿಮ್ ಪಂಘಲ್ (53 ಕೆಜಿ), ಅನ್ಶು ಮಲಿಕ್ (57 ಕೆಜಿ), ನಿಶಾ ದಹಿಯಾ (68 ಕೆಜಿ), ರಿತಿಕಾ ಹೂಡಾ (76 ಕೆಜಿ) ಅವರು ಮಹಿಳಾ ವಿಭಾಗದಲ್ಲಿ ಮತ್ತು ಅಮನ್ ಸೆಹ್ರಾವತ್ (57 ಕೆಜಿ) ಅವರು ಪುರುಷರ ವಿಭಾಗದಲ್ಲಿ ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

‘ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಕುಸ್ತಿಪಟುಗಳಿಗೆ ಪೂರ್ಣ ಬೆಂಬಲ ಒದಗಿಸುವ ಮೂಲಕ ನಮ್ಮ ಕ್ರೀಡಾಪಟುಗಳು ತರಬೇತಿಗೆ ಉತ್ತಮ ಸೌಲಭ್ಯಗಳನ್ನು ಪಡೆದು ಶ್ರೇಷ್ಠ ಪ್ರದರ್ಶನ ನೀಡುವಂತಾಗಲಿ ಎಂಬುದು ನಮ್ಮ ಗುರಿ’ ಎಂದು ಐಒಎ ಅಧ್ಯಕ್ಷೆ ಪಿ.ಟಿ.ಉಷಾ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕುಸ್ತಿಪಟುಗಳು, ತರಬೇತುದಾರರು, ಫಿಸಿಯೋಥೆರಪಿಸ್ಟ್‌ಗಳು, ಪೌಷ್ಟಿಕ ತಜ್ಞರು, ಮೆಂಟಲ್ ಕಂಡಿಷನಿಂಗ್ ಕೋಚ್‌ಗಳು ಮತ್ತು ಇತರ ಅಗತ್ಯ ಸಿಬ್ಬಂದಿಗೆ ಬೆಂಬಲ ನೀಡಲಾಗುವುದು. ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶಾ ಅವರ ತರಬೇತಿಗಾಗಿ ಹೆಚ್ಚಿನ ಸಹಾಯಕ ಸಿಬ್ಬಂದಿಯನ್ನು ಒದಗಿಸಲಾಗುವುದು ಎಂದು ಡಬ್ಲ್ಯುಎಫ್ಐ ಅಧ್ಯಕ್ಷ ಸಂಜಯ್ ಸಿಂಗ್ ಹೇಳಿದ್ದಾರೆ.

ವಿನೇಶಾ ಅವರಿಗೆ ತರಬೇತಿಗೆ ಹೆಚ್ಚುವರಿ ನೆರವು ಸಿಬ್ಬಂದಿಯನ್ನು ಒದಗಿಸಲಾಗುವುದು ಎಂದು ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್ ಹೇಳಿದ್ದಾರೆ. ‘ವಿನೇಶಾ ಮತ್ತು ಇತರ ಎಲ್ಲಾ ಪೈಲ್ವಾನರು ಅಗತ್ಯ ಬೆಂಬಲ ಪಡೆದು ಅಮೋಘ ಪ್ರದರ್ಶನ ನೀಡಬೇಕೆಂಬಹುದು ನಮ್ಮ ಅಪೇಕ್ಷೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.