ಗುರುಗ್ರಾಮ: ಪ್ರಶಸ್ತಿಗೆ ತವರಿನ ನೆಚ್ಚಿನ ಆಟಗಾರ್ತಿಯಾಗಿದ್ದ ಅಂಕಿತಾ ರೈನಾ ಅವರು ಐಟಿಎಫ್ ಮಹಿಳಾ ಓಪನ್‌ನ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಶ್ರೇಯಾಂಕರಹಿತ ಯೊನ್ ವೂ ಕು ವಿರುದ್ಧ ನೇರ ಸೆಟ್‌ಗಳ ಸೋಲನುಭವಿಸಿದರು. ಆದರೆ, ಕಜಕಸ್ತಾನದ ಸಹ ಆಟಗಾರ ಜಿಬೆಕ್ ಕುಲಂಬಯೇವಾ ಅವರೊಂದಿಗೆ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು.

ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ್ತಿ ಅಂಕಿತಾ 6-7 (4), 3-6 ರಿಂದ ಕೊರಿಯಾದ ಎದುರಾಳಿ ವಿರುದ್ಧ ಸೋಲು ಕಂಡರು.

ಅಗ್ರ ಶ್ರೇಯಾಂಕದ ಸ್ಲೊವೇನಿಯಾ ಆಟಗಾರ್ತಿ ದಲಿಲಾ ಜಕುಪೊವಿಕ್ ಅವರು 6-4, 2-6, 7-6 (0) ರಿಂದ ಲಿಥುವೇನಿಯಾದ ಮೂರನೇ ಶ್ರೇಯಾಂಕದ ಜಸ್ಟಿನಾ ಮಿಕುಲ್ಸ್ಕಿಟ್ ವಿರುದ್ಧ ಸೋತರು.

ಅಂಕಿತಾ ನಂತರ ಕುಲಂಬಯೇವಾ ಅವರ ಜೊತೆಗೂಡಿ ಡಬಲ್ಸ್ ಫೈನಲ್‌ನಲ್ಲಿ 6–4, 6–2 ರಿಂದ ಸ್ವೀಡನ್‌ನ ಜಾಕ್ವೆಲಿನ್ ಕಬಾಜ್ ಅವಾದ್ ಮತ್ತು ಜಸ್ಟಿನಾ ಮಿಕುಲ್ಸ್ಕಿಟ್ ಅವರನ್ನು ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.