ನವದೆಹಲಿ: ಭಾರತದ ಟೇಬಲ್ ಟೆನಿಸ್ ಜೋಡಿ ಮಣಿಕಾ ಬಾತ್ರಾ ಮತ್ತು ಅರ್ಚನಾ ಕಾಮತ್ ಅವರು ಅಂತರರಾಷ್ಟ್ರೀಯ ಟೇಬಲ್ ಟಿನಿಸ್ ಫೆಡರೇಷನ್ ರ್ಯಾಂಕಿಂಗ್ನಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.

ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಮಣಿಕಾ ಮತ್ತು ಬೆಂಗಳೂರು ಹುಡುಗಿ ಅರ್ಚನಾ ಜೋಡಿಯು 1501 ಅಂಕಗಳನ್ನು ಗಳಿಸಿದೆ. ಎರಡು ಸ್ಥಾನಗಳ ಬಡ್ತಿಯೊಂದಿಗೆ ಅಗ್ರ ಐದರೊಳಗೆ ಕಾಣಿಸಿಕೊಂಡಿದೆ.

ದೋಹಾದಲ್ಲಿ ಈಚೆಗೆ ನಡೆದಿದ್ದ ಡಬ್ಲ್ಯುಟಿಟಿ ಸ್ಟಾರ್ ಕಂಟೆಂಡರ್ ಟಿಟಿಯಲ್ಲಿ ಮಣಿಕಾ–ಅರ್ಚನಾ ಜೋಡಿಯು ಕಂಚಿನ ಪದಕ ಗಳಿಸಿತ್ತು.

ಚೀನಾದ ವಾಂಗ್ ಮನ್ಯೂ ಮತ್ತು ಸುನ್ ಯಿಂಗ್ಶಾ 4289 ಪಾಯಿಂಟ್ಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. ಜಪಾನ್ ಜೋಡಿ ಮಿಮಾ ಇಟೊ ಮತ್ತು ಹಿನಾ ಹಯಾತಾ ಹಾಗೂ ಲಕ್ಸೆಂಬರ್ಗ್ನ ಶಿಯಾ ಲಿಯಾನ್ ನಿ ಮತ್ತು ಸರಾ ಡಿ ನಟ್ಟಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.