ಬೆಂಗಳೂರು: ಮಂಗಳೂರು ಬಿಸಿ ತಂಡವು ಕರ್ನಾಟಕ ರಾಜ್ಯ ಗ್ರಾಮೀಣ ಪುರುಷರ ಬ್ಯಾಸ್ಕೆಟ್ಬಾಲ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಮಂಗಳೂರು ತಂಡವು 81–65 ರಿಂದ ರೈಸಿಂಗ್ ಸ್ಟಾರ್ ಬಿ.ಸಿ. ಮೈಸೂರು ತಂಡವನ್ನು ಮಣಿಸಿತು. ಮಂಗಳೂರು ತಂಡದ ಪರ ಅಶ್ವಿಜ್ 29, ಗಣೇಶ್ 19 ಪಾಯಿಂಟ್ಸ್ ಗಳಿಸಿದರು.

ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಆರ್ಯನ್ ಬಿಸಿ ಮೈಸೂರು ತಂಡವು 66–52 ರಿಂದ ಹೊಯ್ಸಳ ಬಿ.ಸಿ. ಹಾಸನ ತಂಡವನ್ನು ಸೋಲಿಸಿತು.

ವಿಜೇತ ತಂಡಕ್ಕೆ ₹50 ಸಾವಿರ, ರನ್ನರ್ ಅಪ್ ತಂಡಕ್ಕೆ ₹ 30 ಸಾವಿರ, ತೃತೀಯ ₹ 20 ಸಾವಿರ, ನಾಲ್ಕನೇ ಸ್ಥಾನಕ್ಕೆ ₹ 10 ಸಾವಿರ ನಗದು ನೀಡಿ ಗೌರವಿಸಲಾಯಿತು. ಟೂರ್ನಿಯ ಉತ್ತಮ ಆಟಗಾರ ಆರ್ಯನ್ ಬಿಸಿ ಮೈಸೂರು ತಂಡದ ಶಕ್ತಿ ಅವರಿಗೆ ₹ 5 ಸಾವಿರ ನಗದು ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.